ಕೊಲ್ಹಾರ: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ದ್ಯಾಮವ್ವ ದೇವಿ ಉಡಿ ತುಂಬುವ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ ಮೇಳ, ವಿಜ್ಞಾನಿಗಳಿಂದ ವಿಚಾರಗೋಷ್ಠಿ ಹಾಗೂ ವಸ್ತು ಪ್ರದರ್ಶನ ಮತ್ತು ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ದ್ಯಾಮವ್ವ ದೇವಿ ಜಾತ್ರಾ ಕಮಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 4ರಂದು ಸೋಮವಾರ ರೈತ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಕೃಷಿ ಮಳಿಗೆಗಳ ಉದ್ಘಾಟನೆ ಕಾರ್ಯಕ್ರಮ ಜರುಗುವುದು. ಅದೇ ರೀತಿ ಮೇ 5 ಮಂಗಳವಾರದಂದು ಶ್ರೀ ದ್ಯಾಮವ್ವ ದೇವಿಯ ಉಡಿ ತುಂಬುವ ಹಾಗೂ ಉತ್ಸವ ಕಾರ್ಯಕ್ರಮ ಜರುಗುವುದು. ಅದೇ ದಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಜರುಗುವುದು. ಮೇ 6 ಬುಧವಾರದಂದು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು ಎಂದರು.

ವಿಜಯಪುರ ಜಿಲ್ಲಾ ಕೃಷಿ ಅಧಿಕಾರಿ ಆರ್.ಬಿ.ಬೆಳ್ಳಿ ಮಾತನಾಡಿ, ದ್ಯಾಮವ್ವ ದೇವಿ ಜಾತ್ರಾ ಅಂಗವಾಗಿ ಮೇ 4, 5 ಹಾಗೂ 6 ರಂದು ಮೂರು ದಿನಗಳ ಕಾಲ ಕೃಷಿ ಮೇಳ, ವಿಜ್ಞಾನಿಗಳಿಂದ ವಿಚಾರಗೋಷ್ಠಿ ಹಾಗೂ ವಸ್ತು ಪ್ರದರ್ಶನ ಮತ್ತು ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರೈತ ಮುಖಂಡ ಸಿದ್ದಪ್ಪ ಬಾಲಗೊಂಡ ಮಾತನಾಡಿ, ಈ ಜಾತ್ರೆಯ ವೇಳೆ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಕರೆಸಿ ಎಲ್ಲ ರೈತರೊಂದಿಗೆ ಚಿಂತನ ಮಂಥನ ಮಾಡಲಾಗುವುದು. ಸದೃಢವಾದ ದೇಶ ಕಟ್ಟಲು ಸದೃಢವಾದ ಯುವಕರು ಅವಶ್ಯ. ಹೀಗಾಗಿ ಈ ಅವರೆಲ್ಲರಿಗೂ ಇಂದು ಒಳ್ಳೆಯ ಆಹಾರವೂ ಕೂಡಾ ಬಹಳ ಮುಖ್ಯವಾಗಿದೆ. ಹೀಗಾಗಿ ಎಲ್ಲ ರೈತರು ರೈತ ಜಾತ್ರೆಗೆ ಆಗಮಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ದ್ಯಾಮವ್ವ ದೇವಿ ಜಾತ್ರಾ ಕಮಿಟಿ ಕಾರ್ಯದರ್ಶಿ ಈರಯ್ಯ ಮಠಪತಿ , ಪ್ರಗತಿಪರ ರೈತ ಮುಖಂಡರಾದ ಶ್ರೀಶೈಲ ಗಿಡ್ಡಪ್ಪಗೋಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-26-138422729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.