ಇಂಡಿ: ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ವೀರಭದ್ರದೇವರ ಜಾತ್ರೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಮೇ 18 ಹಾಗೂ 19 ರಂದು ಆಯೋಜಿಸಲಾಗಿದೆ.

ಮೇ 18 ರಂದು ಬೆಳ್ಳಿಗೆ 5 ಗಂಟೆಗೆ ದೇವಸ್ಥಾನದಲ್ಲಿ ವೀರಭದ್ರ ದೇವರ ಶಿಲಾಮೂರ್ತಿಗೆ ಭಕ್ತರಿಂದ ಅಭಿಷೇಕ, ವಿಶೇಷ ಪೂಜೆ ನೆರವೇರಲಿದೆ. ಬಳಿಕ ಇದೇ ದಿನ ರಾತ್ರಿ 8 ಗಂಟೆಗೆ ದೇವಸ್ಥಾನದ ಎದುರು ಅಗ್ನಿ ಪ್ರಜ್ವಲನ ಕಾರ್ಯಕ್ರಮ ಶ್ರದ್ದಾ ಭಕ್ತಿಯಿಂದ ನಡೆಯಲಿದೆ. ನಂತರ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೇ 19 ರಂದು ಬೆಳಿಗ್ಗೆ 5 ಗಂಟೆಗೆ ಶ್ರೀ ವೀರಭದ್ರ ದೇವರ ಶೀಲಾಮೂರ್ತಿಗೆ ಭಕ್ತರಿಂದ ರುದ್ರಾಭಿಷೇಕ ನೆರವೇರಲಿದೆ. ಬಳಿಕ 8 ಗಂಟೆಗೆ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ವೀರಭದ್ರ ದೇವರ ಉತ್ಸವ ಮೂತರ್ಿಯ ಭವ್ಯ ಮೆರವಣಿಗೆ ಸಂಬಾಳ ವಾದ್ಯ ಮೇಳದೊಂದಿಗೆ ಜರುಗಲಿದೆ.

ಬಳಿಕ ಈ ಮೆರವಣಿಗೆಯೂ ಊರ ಹೊರಗಿನ ಪಾದಗಟ್ಟಿ ತಲುಪಿದ ಬಳಿಕ ಪಾದಗಟ್ಟಿ ಪೂಜೆ ಮಹಾ ಮಂಗಳಾರತಿ ನೆರವೇರಿದ ಬಳಿಕ ಈ ಮೆರವಣಿಗೆಯು ಭಕ್ತರ ಜೈಕಾರದೊಂದಿಗೆ ಮರಳಿ ಮೂಲ ದೇವಸ್ಥಾನ ತಲುಪಿದ ಕೂಡಲೇ ಅಗ್ನಿ ಪ್ರವೇಶ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಲಿದೆ. ಬಳಿಕ ಭಕ್ತರಿಗೆ ಅನ್ನ ಪ್ರಸಾದ ವಿತರಣೆ ನಡೆಯಲಿದೆ.

ಇದಕ್ಕೂ ಮುನ್ನ ಮೇ 15 ರಂದು ಸಂಜೆ 6 ಗಂಟೆಗೆ ಶ್ರೀ ವೀರಭದ್ರ ದೇವರ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ಹಾಗೂ ಕಾಶಿ ಕಟ್ಟುವ ಕಾರ್ಯಕ್ರಮ ಗ್ರಾಮದ ಸಂಪ್ರದಾಯದಂತೆ ನೆರವೇರಲಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-26-726525287

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.