ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಸ್ಯೆಗಳ ವಿರುದ್ದ ಧ್ವನಿ ಎತ್ತಲಿ ಕಾವ್ಯ

ಕಾವ್ಯ ಸಂಭ್ರಮ ಕವಿಗೋಷ್ಠಿಯಲ್ಲಿ ದಸ್ತಗಿರಸಾಬ್ ದಿನ್ನಿ ಕರೆ   
Published : 30 ಜುಲೈ 2023, 15:12 IST
Last Updated : 30 ಜುಲೈ 2023, 15:12 IST
ಫಾಲೋ ಮಾಡಿ
Comments

ವಿಜಯಪುರ: ಕವಿಯು ತನ್ನ ಕಾವ್ಯದ ಮೂಲಕ ಇಂದಿನ ಸಮಸ್ಯೆಗಳ ವಿರುದ್ದ ಧ್ವನಿ ಎತ್ತುವ ಕೆಲಸ ಮಾಡಬೇಕು. ಮನುಷ್ಯನ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಕವಿ ದಸ್ತಗಿರಸಾಬ್ ದಿನ್ನಿ ಹೇಳಿದರು.

ದಲಿತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, ಸಮಾಜದಲ್ಲಿನ ಕೊಳೆಯನ್ನು ಸ್ವಚ್ಛಗೊಳಿಸುವ ಕೆಲಸ ಕಾವ್ಯಗಳು ನಿರಂತರವಾಗಿ ಮಾಡಬೇಕು ಎಂದರು.

ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ಅವರನ್ನು ವಿರೋಧಿಸುವ ನಡೆ ಹೆಚ್ಚಾಗುತ್ತಿದ್ದು, ಅದನ್ನು ತಡೆಯುವ ಹೋರಾಟ ಕಾವ್ಯಗಳ ಮೂಲಕ ಮಾಡಬೇಕು. ಸತ್ಯ ಮತ್ತು ಮಾನವಿಯತೆ ಕಡೆ ಕರೆತರುವ ಕೆಲಸ ಕಾವ್ಯಗಳು ಮಾಡಬೇಕು ಎಂದರು.

ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯೆ ಜಯದೇವಿ ಗಾಯಕವಾಡ ಮಾತನಾಡಿ, ಕವಿಗಳ ಆಶಯ ಮಾನವಿಯತೆ ಉಳಿಸುವುದಾಗಿದೆ. ಕವಿತೆಗಳಲ್ಲಿ ಸಂವೇದನೆ ಇರಬೇಕು. ಯಾವ ಕವಿತೆಯಲ್ಲಿ ಸಂವೇದನೆ ಇರುವುದಿಲ್ಲವೋ ಆ ಕವಿತೆಗೆ ಅರ್ಥವೇ ಇರುವುದಿಲ್ಲ ಎಂದು ಹೇಳಿದರು.

ಕವಿತೆಗಳಲ್ಲಿ ಸಾಮಾಜಿಕ ಕಳಕಳಿಯ ಸಂವೇದನೆಗಳಿರಬೇಕು. ಅಂತಹ ಕವಿತೆಗಳು ಇಂದಿನ ಸಾಹಿತ್ಯದಲ್ಲಿ ಹೆಚ್ಚಾಗಿ ಬರಬೇಕಿದೆ ಎಂದರು.

ಕವಿಗಳಾದ ಮಹೇಶ ಇಸರವಾಡಿ, ಗಿರಿಜಾ.ಕೆ, ರಮೇಶ ಕತ್ತಿ, ವಿದ್ಯಾ ಬಟಕುರ್ಕಿ, ನಾಗರಾಜ ವಲ್ಕಂದಿನ್ನಿ, ಶಿವಪುತ್ರ ಅಜಮನಿ, ಸುರೇಶ ರಾಜಮಾನೆ, ಕಲ್ಲಪ ಶಿವಶರಣ, ಮಾರುತಿ ತಳವಾರ, ಲಾಯಪ್ಪ ಇಂಗಳೆ, ಪಾರ್ವತಿ ಸೋನಾರೆ, ಹಾ.ಬಾ ನಾಗೇಶ, ಸೇರಿದಂತೆ ಅನೇಕರು ಕವನ ವಾಚನ ಮಾಡಿದರು.

ಸಮ್ಮೇಳದ ಸರ್ವಾಧ್ಯಕ್ಷ ಎಚ್.ಟಿ ಪೋತೆ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಕವಿ ವಿದ್ಯಾವತಿ ಅಂಕಲಗಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT