ಮನಗೂಳಿ: ಪಟ್ಟಣದ ಸಂಸ್ಥಾನ ಹಿರೇಮಠದ ಸಂಗನಬಸವ ಮಹಾಸ್ವಾಮಿಗಳ 43ನೇ ಪುಣ್ಯ ಸ್ಮರಣೋತ್ಸವ ಹಾಗೂ ಜಗದ್ಗುರು ಮಹಾಂತ ಶಿವಾಚಾರ್ಯರ 13ನೇ ಯಾತ್ರಾ ಮಹೋತ್ಸವದ ಅಂಗವಾಗಿ ಮೇ 12ರಿಂದ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಿಳೆಯರಿಂದ ವೈಭವದ ರಥೋತ್ಸವ ಜರುಗಲಿದೆ ಎಂದು ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯರು ತಿಳಿಸಿದ್ದಾರೆ.

ಮೇ 12ರಂದು ಸಂಜೆ 7 ಗಂಟೆಗೆ ವಿವಿಧ ಪೂಜ್ಯರ ಸಾನಿಧ್ಯದಲ್ಲಿ ಹಾಗೂ ಹಲವು ಮುಖಂಡರು ಮತ್ತು ಪ್ರಮುಖರ ಉಪಸ್ಥಿತಿಯಲ್ಲಿ ಶಿವಶರಣೆ ಅಕ್ಕಮಹಾದೇವಿ ಅವರ ಪುರಾಣ ಮಹಾ ಮಂಗಲೋತ್ಸವ ಹಾಗೂ ಧರ್ಮಚಿಂತನ ಸಭೆ ಜರುಗಲಿದೆ.

ಮೇ 13ರಂದು ಬೆಳಿಗ್ಗೆ 7 ಗಂಟೆಗೆ ಪಂಚಾಚಾರ್ಯ ಧ್ವಜಾರೋಹಣ ಬಳಿಕ ಕುಂಭೋತ್ಸವವು ಪಟ್ಟಣದ ಬಸವೇಶ್ವರ ದೇವಾಲಯದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ಆಗಮಿಸುವುದು. ಬೆಳಿಗ್ಗೆ 8.30ಕ್ಕೆ ಉಭಯ ಪೂಜ್ಯರ ಕರ್ತೃ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಅಯ್ಯಾಚಾರ, ಶಿವಧೀಕ್ಷೆ ಪೂಜಾ ಕಾರ್ಯಕ್ರಮಗಳು ಜರುಗುವವು.

ಬೆಳಿಗ್ಗೆ 9ಗಂಟೆಗೆ ಶ್ರೀಗುರು ಸಂಗನಬಸವ ಮಹಾಸ್ವಾಮಿಗಳು ಹಾಗೂ ಮಹಾಂತ ಸ್ವಾಮೀಜಿ ಅವರ ರಜತ ಮೂರ್ತಿಗಳ ಅಡ್ಡಪಲ್ಲಕ್ಕಿ ಉತ್ಸವವು ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ತಲುಪಲಿದೆ. ಮಧ್ಯಾಹ್ನ 12.45ಕ್ಕೆ ಹಲವು ಪೂಜ್ಯರ ಸಾನಿಧ್ಯದಲ್ಲಿ, ವಿವಿಧ ಜನಪ್ರತಿನಿಧಿಗಳು, ರಾಜಕೀಯ ಧುರೀಣರು ಹಾಗೂ ಮುಖಂಡರ ಉಪಸ್ಥಿತಿಯಲ್ಲಿ ಧರ್ಮಸಭೆ ಹಾಗೂ ರಾಜ್ಯಮಟ್ಟದ ಸಂಗನಬಸವಶ್ರೀ ಪ್ರಶಸ್ತಿ ಸಮಾರಂಭ ನಡೆಯಲಿದೆ. ಸಂಜೆ 5.30ಕ್ಕೆ ಶ್ರೀಮಠದ ಮುಂಭಾಗದಲ್ಲಿ ಮಹಿಳೆಯರಿಂದ ವೈಭವದ ರಥೋತ್ಸವ ಜರುಗಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-26-2034436821

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.