ಹೊರ್ತಿ: ಸಮೀಪದ ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿಯವರು ಲೋಕಕಲ್ಯಾಣಾರ್ಥ, ವಿಶ್ವಶಾಂತಿಗಾಗಿ, ಮಳೆ ಬೆಳೆ ಸಮೃದ್ಧಿಗಾಗಿ ಮೌನ ಶಿವಪೂಜಾನುಷ್ಠಾನವನ್ನು ಅಧಿಕ ಮಾಸದ ಶ್ರಾವಣ ಮಾಸದ (1 ತಿಂಗಳ ಪರ್ಯಂತ) ಹಾಗೂ ನಿಜ ಶ್ರಾವಣ ಮಾಸದ (9 ದಿನಗಳ ಪರ್ಯಂತ)ಲ್ಲಿ ನಡೆಸಿದ್ದಾರೆ.
ಆ. 25ರಂದು ಕನ್ನೂರು ಗ್ರಾಮದ ಶ್ರೀಮಠದ ಕೃಷಿ ಭೂಮಿಯ ಶಿವಯೋಗಾನುಷ್ಠಾನ ಕುಟೀರ ದಲ್ಲಿ ಮಂಗಲ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮದ ಅನ್ನ ಮಹಾಪ್ರಸಾದದ ಸೇವೆಯನ್ನು ವಿಜಯಪುರ ಬಂಜಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎಲ್. ಚವ್ಹಾಣ ಅವರು ಕಲ್ಪಿಸಿದ್ದಾರೆ.