ವಿಜಯಪುರ: ‘ಎಲ್ಲಾ ಜಾತಿ ಮತ್ತು ಧರ್ಮದವರ ಆಚರಣೆಗಳಿಗೆ ಕಾಂಗ್ರೆಸ್ ಸರ್ಕಾರ ಗೌರವ ಕೊಡುತ್ತದೆ. ನಾವು (ಕಾಂಗ್ರೆಸ್) ಸಂಕುಚಿತ ಅಲ್ಲ, ಸಮಗ್ರ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಪಾದಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನಿವಾರ, ವಿಭೂತಿ, ಕುಂಕಮ, ಬುರ್ಖಾ, ಪೇಟ ಧರಿಸುವುದು ಅವರವರ ಸಂಪ್ರದಾಯ, ಧಾರ್ಮಿಕ ಆಚರಣೆ. ಅದಕ್ಕೆ ಯಾರು ಬೇಡ ಅನ್ನುವುದಿಲ್ಲ ಮತ್ತು ಯಾರೂ ಅಡ್ಡಿಪಡಿಸುವುದಿಲ್ಲ, ಅದನ್ನು ನಾವು ಬೆಂಬಲಿಸುತ್ತೇವೆ’ ಎಂದರು.

‘ದೇವಸ್ಥಾನ ಅಥವಾ ಮಠಗಳ ಮೇಲೆ ಕೇಸರಿ ಧ್ವಜ ಇರುವುದು ಸಹಜ. ಆದರೆ, ಈ ಹಿಂದೆ ಶಾಲಾ ಮಕ್ಕಳು ಕೇಸರಿ ಶಾಲು ಧರಿಸುತ್ತಿದ್ದರಾ? ಬಿಜೆಪಿ, ಎಬಿವಿಪಿ, ಆರ್ಎಸ್ಎಸ್ನವರದ್ದು ಸುಮ್ಮನೆ ಮಂಡ ನ್ಯಾಯ, ಇಲ್ಲದಿರುವುದನ್ನು ಸೃಷ್ಟಿ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.