ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಹಣದಲ್ಲಿ ಕೊಳವೆಬಾವಿ ಕೊರೆಯಿಸಿದ ಶಾಸಕ ಅಶೋಕ ಮನಗೂಳಿ

Published 2 ಜೂನ್ 2023, 13:08 IST
Last Updated 2 ಜೂನ್ 2023, 13:08 IST
ಅಕ್ಷರ ಗಾತ್ರ

ಸಿಂದಗಿ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಪಟ್ಟಣದ 19ನೇ ವಾರ್ಡ್ ಕುಲಕರ್ಣಿ ಬಡಾವಣೆಯಲ್ಲಿ ಶಾಸಕ ಅಶೋಕ ಮನಗೂಳಿ ಸ್ವಂತ ಹಣದಲ್ಲಿ ಕೊಳವೆಬಾವಿ ಕೊರೆಯಿಸಿ ಶುಕ್ರವಾರ ಗಂಗಾಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಮಾತು ಸಾಧನೆಯಾಗಬಾರದು. ಸಾಧನೆಯೇ ಮಾತನಾಡಬೇಕು. ಅಭಿವೃದ್ದಿ ವಿಚಾರದಲ್ಲಿ ಸಿಂದಗಿಯನ್ನು ರಾಜ್ಯದಲ್ಲಿ ಗುರುತಿಸುವಂಥ ಮತಕ್ಷೇತ್ರವನ್ನಾಗಿಸುವ ಸಂಕಲ್ಪ ನನ್ನದಾಗಿದೆ. ಪಟ್ಟಣದ ಪ್ರತಿಯೊಂದು ವಾರ್ಡ್‌ಗಳಲ್ಲಿ ಸುಸಜ್ಜಿತ ರಸ್ತೆ, ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಲಭ್ಯ ಒದಗಿಸುವುದು ಆದ್ಯಯತೆಯಾಗಿದೆ ಎಂದರು.

ವಾರ್ಡಿನ ಮಹಿಳೆಯರು ಗಂಗಾಪೂಜೆ ನೆರವೇರಿಸಿದರು.

ಡಾ.ಮುತ್ತು(ಚನ್ನವೀರ) ಮನಗೂಳಿ, ಪುರಸಭೆ ಸದಸ್ಯರಾದ ಬಸವರಾಜ ಯರನಾಳ, ಹಾಸಿಂಪೀರ ಆಳಂದ ಹಾಗೂ ಮಂಜುನಾಥ ಬಿಜಾಪೂರ, ಎಂ.ಎ.ಖತೀಬ, ಶಾಂತಪ್ಪ ರಾಣಾಗೋಳ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT