ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧವಾನಂದ ಪ್ರಭುಜಿಯವರ ಕೊಡುಗೆ ಅಪಾರ: ಶಾಸಕ ಲಕ್ಷ್ಮಣ ಸವದಿ

Published 1 ಜೂನ್ 2023, 14:33 IST
Last Updated 1 ಜೂನ್ 2023, 14:33 IST
ಅಕ್ಷರ ಗಾತ್ರ

ಹೊರ್ತಿ: 'ದೇಶದ ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ, ಗೋವಾ ವಿಮೋಚನೆ ಹೋರಾಟ ಹಾಗೂ ಇಂಚಗೇರಿ ಮಠದ 5ನೇ ಗುರುಗಳಾಗಿದ ಸ್ವಾತಂತ್ರ ಸಂಗ್ರಾಮ ರೂವಾರಿ, ಕ್ರಾಂತಿಯೋಗಿ, ಶ್ರೀ ಮಾಧವಾನಂದ ಪ್ರಭುಜಿಯವರ ಕೊಡುಗೆ ಅಪಾರವಾಗಿದೆ' ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸಮೀಪದ ಶ್ರೀಕ್ಷೇತ್ರ ಇಂಚಗೇರಿಮಠದಲ್ಲಿ ಸಮರ್ಥ ಸದ್ಗುರು ಶ್ರೀ ಮಾಧವಾನಂದ ಪ್ರಭುಜಿಯವರ 43ನೇ ಪುಣ್ಯಾರಾಧನೆ ಪ್ರಯುಕ್ತ ಬುಧವಾರ ಶ್ರೀಮಠದ ಪೀಠಾಧ್ಯಕ್ಷ ರೇವಣಸಿದ್ಧೇಶ್ವರ ಮಹಾರಾಜರ ಸಾನಿಧ್ಯ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು


'ಇಂಚಗೇರಿಮಠ ಆಧ್ಯಾತ್ಮ ಸಂಪ್ರದಾಯವು ಜಾತ್ಯತೀತ ಮಠವಾಗಿದೆ. ಇಲ್ಲಿ ಯಾವುದೇ ಜಾತಿ, ಮತ, ಪಂಥ ಬೇಧ, ಭಾವ ಎನ್ನದೇ, ಎಲ್ಲರೂ ಒಂದು ಎಂಬ ಭಾವನೆ ಹೊಂದಿ ಇಲ್ಲಿರುವ ಪ್ರತಿಯೊಬ್ಬರು ಮನುಷ್ಯ ಜಾತಿಯವರು ಎಂಬ ತತ್ವ ಸಿದ್ಧಾಂತದಡಿ ಬದುಕು ನಡೆಸುತ್ತಿರುವ ಇದೊಂದು ಮಾದರಿ ಮಠವಾಗಿದೆ ಎಂದವರು ಹುಟ್ಟು ಆಕಸ್ಮಿಕ, ಸಾವು ಖಚಿತ ಇರುವ ಈ ಬದುಕಿನ ಸದುಪಯೋಗ ಮಾಡಿಕೊಂಡು

ಜೀವನದುದ್ಧಕ್ಕೂ ಪುಣ್ಯ ಕಾರ್ಯ ಮಾಡಬೇಕು. ಆಯುಷ್ಯ, ಐಶ್ವರ್ಯ, ಅಧಿಕಾರ ಯಾರಿಗೂ ಶಾಸ್ವತವಲ್ಲ. ಬದುಕಿನಲ್ಲಿ ಮಾಡುವ ಒಳ್ಳೆಯ ಕಾರ್ಯಗಳು ನಾವು ಮರಣಿಸಿದಾಗ ಸ್ಮಶಾನ ಕೂಡ ಕಣ್ಣೀರು ಹಾಕಬೇಕು ಅಂಥಹ ಬದುಕು ನಮ್ಮದಾಗಿರಬೇಕು' ಎಂದು ಲಕ್ಷ್ಮಣ ಸವದಿ ಹೇಳಿದರು


ಶ್ರೀಮಠದ ಪೀಠಾಧ್ಯಕ್ಷ ರೇವಣಸಿದ್ಧೇಶ್ವರ ಮಹಾರಾಜರ ಸಾನಿಧ್ಯ ಆಶೀರ್ವಚನ ನೀಡಿ, ' ಜನ್ಮಗಳಲ್ಲಿ ಮನುಷ್ಯ ಅತ್ಯಂತ ಶ್ರೇಷ್ಠವಾಗಿದ್ದು, ಆದ್ದರಿಂದ ಈ ಮನುಷ್ಯ ಸಾಧ್ಯವಾದಷ್ಟು ಇನ್ನೊಬ್ಬರಿಗೆ ಒಳ್ಳೆಯ ಕಾರ್ಯ ಮಾಡು, ಮಾಡುವುದು ಆಗದಿದದ್ದರೇ ಬೀಡು, ಆದರೆ ಕೆಟ್ಟ ಕೆಲಸ ಮಾಡಬೇಡ ಎಂದವರು ಮನ:ಶಾಂತಿಗೆ ಆಧ್ಯಾತ್ಮ, ಸತ್ಸಂಗ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸದ್ವೀಚಾರ,ಆಲನೆ-ಪಾಲನೆಯಿಂದ ಶಾಂತಿ ನೆಮ್ಮದಿ ಸಿಗಲಿದೆ' ಎಂದು ನುಡಿದರು.


ರಾಯಭಾಗ ಶಾಸಕ ಧುರ್ಯೋಧನ ಐಹೊಳಿ ಮಾತನಾಡಿ,' ಇಂಚಗೇರಿ ಮಠಕ್ಕೆ ಶೃದ್ಧಾ, ಭಕ್ತಿ, ಭಾವದಿಂದ ನಡೆದುಕೊಂಡರೇ ದೇವರ ಕೃಪಾಶೀರ್ವಾದ ಸಿಗಲಿದೆ'ಎಂದು ಹೇಳಿದರು.


ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಇಂಚಗೇರಿ ಮಠವು ಸ್ವಾತಂತ್ರ್ಯ ಹೋರಾಟ ಸೇರಿದಂತೆ ಬಡ ಜನ ಹಾಗೂ ದೀನ ದುರ್ಬಲ, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಕೆಳಸ್ತರದ ಜನರ ಮತ್ತು ರೈತಾಪಿ ಜನರ ಪರವಾಗಿ ನಿಂತು ನ್ಯಾಯ ಕೋಡಿಸುವಲ್ಲಿ ಹೋರಾಡಿ ಸಮಾಜದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಿದ ಮಾದರಿಯ ಮಠವಾಗಿದೆ' ಎಂದು ಹೇಳಿದರು.


ಸೋಲಾಪೂರದ ರೇವಣಸಿದ್ಧ ಹೊನ್ನಮರಾಠಿ ಮಹಾರಾಜ ಮಾತನಾಡಿ, 'ಮನುಷ್ಯ ಜನ್ಮಗಳಲ್ಲಿ ಮಾನವ ಜನ್ಮ ಶ್ರೇಷ್ಠವಾದ್ದು, ಜಾತಿಯಲ್ಲಿ,1ಗಂಡು,1ಹೆಣ್ಣು ಎರಡೇ ಜಾತಿ, ಮಾನವ ಜನ್ಮ ಸಾರ್ಥಕ ಜೀವನಕ್ಕೆ ಆಧ್ಯಾತ್ಮ ಚಿಂತನ -ಮಂಥನ ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಸುಂದರ ಜೀವನ ಕಂಡುಕೊಳ್ಳಲು ಸಾಧ್ಯ'ಎಂದವರು


ರಾಮತೀರ್ಥದ ತಾರಾಚಂದ ಮಹಾರಾಜ, ಶೇಗುಣಸಿಯ ಹಣಮಂತ ಮಹಾರಾಜ, ತುಕಾರಾಮ ಮಹಾರಾಜ ಅವರು ಮಾತನಾಡಿದರು.ಕ್ಯಾರಗುಡ್ಡದ ಅಭಿನವ ಮಂಜುನಾಥ ಶ್ರೀ, ಅವಜಿಯ ಬಾನು ಮಹಾರಾಜ, ಸುಶೀಲಕುಮಾರ ಬೆಳಗಲಿ, ಮುಕುಂದ ಬೆಳಗಲಿ, ಕಲ್ಲಪ್ಪ ಅರವತ್ತಿ, ಮಲ್ಲಣ್ಣ ಸಕ್ರಿ, ಕೆ.ಕೆ.ಕಳಸದವರ,ನೀಲಪ್ಪಗೌಡ ಬಿರಾದಾರ, ಸುರೇಶ ಜಂಬಗಿ, ಅನುಲ ಮಹಾರಾಜ, ಅಪ್ಪಾಸಾಬ ದಿವಾನಮೋಳ, ತಾನಜಿ ಮಹಾರಾಜ, ಸೋಮನಾಥ ಮಹಾರಾಜ, ಶಂಕರೆಪ್ಪ ಕೌಜಲಗಿ, ನಾಮದೇವ ಕುಡಚಿ,ಬಾನು ಮಹಾರಾಜ ಹಾಗೂ ಕರ್ನಾಟಕ-ಮಹರಾಷ್ಟ್ರದ ಮತ್ತು ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಉಪಸ್ಥಿತರಿ(ಭಾಗಿಯಾಗಿ)ದ್ದರು. ನಂತರ ಆರತಿ ಪದದೊಂದಿಗೆ ಪುಷ್ಪ ವೃಷ್ಠಿಯೊಂದಿಗೆ ಸಪ್ತಾಹವು ಮಂಗಲಗೊಂಡಿತು.

ಹೊರ್ತಿ:ಸಮೀಪದ ಶ್ರೀಕ್ಷೇತ್ರ ಇಂಚಗೇರಿಮಠದಲ್ಲಿ ಶ್ರೀ ಮಾಧವಾನಂದ ಪ್ರಭುಜಿಯವರ 43ನೇ ಪುಣ್ಯಾರಾಧನೆ ಪ್ರಯುಕ್ತ ಬುಧವಾರ  ಶ್ರೀಮಠದ ಪೀಠಾಧ್ಯಕ್ಷ ರೇವಣಸಿದ್ಧೇಶ್ವರ ಮಹಾರಾಜರ ಸಾನಿಧ್ಯ ನಡೆದ ಕಾರ್ಯಕ್ರಮದಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು. ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡರಾಯಭಾಗ ಶಾಸಕ ಧುರ್ಯೋಧನ ಐಹೊಳಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಶ್ರೀ  ತಾರಾಚಂದ ಮಹಾರಾಜ ಹಣಮಂತ ಮಹಾರಾಜ ತುಕಾರಮ ಮಹಾರಾಜ  ಮುಕುಂದ ಬೆಳಗಲಿ ಸುಶೀಲಕುಮಾರ ಬೆಳಗಲಿ ಇತತರು ಇದ್ದರು.
ಹೊರ್ತಿ:ಸಮೀಪದ ಶ್ರೀಕ್ಷೇತ್ರ ಇಂಚಗೇರಿಮಠದಲ್ಲಿ ಶ್ರೀ ಮಾಧವಾನಂದ ಪ್ರಭುಜಿಯವರ 43ನೇ ಪುಣ್ಯಾರಾಧನೆ ಪ್ರಯುಕ್ತ ಬುಧವಾರ  ಶ್ರೀಮಠದ ಪೀಠಾಧ್ಯಕ್ಷ ರೇವಣಸಿದ್ಧೇಶ್ವರ ಮಹಾರಾಜರ ಸಾನಿಧ್ಯ ನಡೆದ ಕಾರ್ಯಕ್ರಮದಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು. ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡರಾಯಭಾಗ ಶಾಸಕ ಧುರ್ಯೋಧನ ಐಹೊಳಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಶ್ರೀ ತಾರಾಚಂದ ಮಹಾರಾಜ ಹಣಮಂತ ಮಹಾರಾಜ ತುಕಾರಮ ಮಹಾರಾಜ  ಮುಕುಂದ ಬೆಳಗಲಿ ಸುಶೀಲಕುಮಾರ ಬೆಳಗಲಿ ಇತತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT