ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ | ಮೊಹರಂ: ಭವ್ಯ ಮೆರವಣಿಗೆ

Published 28 ಜುಲೈ 2023, 15:40 IST
Last Updated 28 ಜುಲೈ 2023, 15:40 IST
ಅಕ್ಷರ ಗಾತ್ರ

ಇಂಡಿ: ಮೊಹರಂ ಅಂಗವಾಗಿ ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ಪಟ್ಟಣದಲ್ಲಿ ಹುಸೇನ್ ಬಾಷಾ ದೇವರ ಮೂರ್ತಿಯ ಪಂಜಾ ಮೆರವಣಿಗೆ ನಡೆಯಿತು. ನಂತರ ಪಂಜಾಗಳನ್ನು ದಫನ್ ಮಾಡಲಾಯಿತು.

ಬೆಳಿಗ್ಗೆ ದಾದಾಗೌಡರ ಮನೆಯವರಿಂದ ಗುಡಿಯಲ್ಲಿ ಪೂಜೆ ನಡೆಯಿತು. ದೇಶಪಾಂಡೆ, ಕುಲಕರ್ಣಿ, ವಾಲಿಕಾರ, ಪೂಜಾರಿ ಸೇರಿದಂತೆ ಪಟ್ಟಣದ ಗಣ್ಯರು ಪಾಲ್ಗೊಂಡಿದ್ದರು.

ಮೆರವಣಿಗೆಯುದ್ದಕ್ಕೂ ಹುಸೇನ್ ಬಾಷಾಕಿ ದೊಸ್ತ ರಾಹೋ ದೀನ ಮತ್ತು ಬಾವಾ ಹೋಗತಾನ ಎಲ್ಲರಿಗೆ ಹೇಳತಾನ ಎಂಬ ಜಯಘೋಷ ಹಾಕುತ್ತಿದ್ದರು. ಮೆರವಣಿಗೆಯುದ್ದಕ್ಕೂ ನಗಾರಿ ಬಾರಿಸಿದ್ದು ವಿಶೇಷ. ಕರಬಲ್ ಕುಣಿತ, ಭಡಂಗ ಕುಣಿತ, ತಾಷಾ, ಬೆಂಡ ಬಾಜಾ, ದಿವಟಿಗೆಗಳು ಆಕರ್ಷಕವಾಗಿದ್ದವು.

ದೇವರು ತಮ್ಮ ಮನೆ ಮುಂದೆ ಬಂದಾಗ ಭಕ್ತರು ಕೊಡದಿಂದ ನೀರು ಹಾಕಿ ನೈವೇದ್ಯ ಸಲ್ಲಿಸುತ್ತಾರೆ ಮತ್ತು ಕೆಲವರು ಮನೆಯ ಮುಂದೆ ಮದ್ದು ಸುಡುತ್ತಾರೆ.

ಪಟ್ಟಣದ ಅಗಸಿಗೆ ದೇವರು ಬಂದಾಗ ಪ್ರತಿವರ್ಷದಂತೆ ಮೂರು ಜೇನು ನೋಣಗಳು ಬಂದು ಪಂಜಾಕ್ಕೆ ಸ್ಪರ್ಶ ಮಾಡಿ ಹೋದಾಗ ಮಾತ್ರ ದೇವರು ತಿರುಗಿ ಪಟ್ಟಣದ ಅಗಸಿಯಿಂದ ಪಟ್ಟಣದ ಒಳಗಡೆ ಪ್ರವೇಶ ಮಾಡುತ್ತಾರೆ ಎಂಬ ಪ್ರತೀತಿ ಇದೆ. ಜೇನು ನೋಣ ಬಂದು ಸ್ಪರ್ಶ ಮಾಡದೇ ಇದ್ದರೆ ದೇವರು ತಿರುಗುವುದಿಲ್ಲ ಎಂದೇ ಹೇಳಲಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT