ಮಂಗಳವಾರ, ಜೂನ್ 15, 2021
22 °C

ವಿಜಯಪುರ: ಹೊಸ ಶಿಕ್ಷಣ ನೀತಿ ವಿರೋಧಿಸಿ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ (ಎನ್‍ಇಪಿ)ಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಅಖಿಲ ಭಾರತ ಪ್ರತಿಭಟನಾ ಸಪ್ತಾಹವನ್ನು ಬೆಂಬಲಿಸಿ ಎಐಡಿವೈಒ ಶುಕ್ರವಾರ ಆನ್‌ಲೈನ್‌ ಚಳವಳಿ ನಡೆಸಿತು.

ಭಾರತದ ನವೋದಯದ ಚಿಂತಕರ ಬೋಧನೆಗಳನ್ನು ಗಾಳಿಗೆ ತೂರಿ, ವೈಜ್ಞಾನಿಕ, ಜನತಾಂತ್ರಿಕ, ಧರ್ಮನಿರಪೇಕ್ಷ ಚಿಂತನೆಗಳನ್ನು ನಾಶಗೊಳಿಸಿ ವಿದ್ಯಾರ್ಥಿಗಳಲ್ಲಿ ಮತೀಯತೆ, ನಿಗೂಢತೆ ಮತ್ತು ಮಧ್ಯಕಾಲೀನ ಮನೋಭಾವವನ್ನು ಬೆಳೆಸುವ ಹೊಸ ಶಿಕ್ಷಣ ನೀತಿಯನ್ನು ಒಪ್ಪುವುದಿಲ್ಲ ಎಂದರು.

ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಕರಣ, ವ್ಯಾಪಾರಿಕರಣ, ಕೇಸರಿಕರಣ ಮತ್ತು ಫ್ಯಾಸಿಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರವು ಶಿಕ್ಷಣ ತಜ್ಞರ, ಬುದ್ಧಿಜೀವಿಗಳ, ವಿಜ್ಞಾನಿಗಳ, ಶಿಕ್ಷಕರ, ಪೋಷಕರ ಮತ್ತು ವಿದ್ಯಾರ್ಥಿಗಳ ವಿರೋಧದ ನಡುವೆಯೂ ಕೋವಿಡ್-19 ಅಸಹಾಯಕ ಪರಿಸ್ಥಿತಿಯ ದುರ್ಲಾಬ ಪಡೆದು ವಂಚನೆಯಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಘೋಷಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಶಿಕ್ಷಣ ನೀಡುವ ಹೊಣೆಯನ್ನು ಕಾರ್ಪೊರೇಟ್‌ ಕಂಪನಿಗಳಿಗೆ ವರ್ಗಾಯಿಸಿ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ದೂರಿದರು. 

ಈ ಹೊಸ ಶಿಕ್ಷಣ ನೀತಿಯು ಜನ ವಿರೋಧಿ ಮತ್ತು ಶಿಕ್ಷಣ ವಿರೋಧಿ ಆಗಿದ್ದು, ಆಳುವ ಬಂಡವಾಳಶಾಹಿ ವರ್ಗ ಮತ್ತು ಬಿಜೆಪಿ ಪಕ್ಷದ ಹಿತವನ್ನು ಕಾಯುವ ಫ್ಯಾಸಿಸ್ಟ್‌ ಯೋಜನೆಯಾಗಿದೆ. ಈ ವಿನಾಶಕಾರಿ ನೀತಿಯನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಎಐಡಿವೈಒನ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ, ಭರತ್‍ಕುಮಾರ, ನಕ್ಷತ್ರ, ಶ್ರೀನಾಥ ಪೂಜಾರಿ, ರಾಕೇಶ ಕುಮಟಗಿ, ರವಿ ಪೂಜಾರಿ, ಸತೀಶ ನಾಟಿಕಾರ, ಶೇಖರ್ ಚೂರಿ, ಬಾಲಾಜಿ ಕಾಂಬ್ಳೆ, ಶರಣು ಅರಳಗುಂಡಗಿ, ಶಿವಾನಂದ ಬಡಿಗೇರ, ಕಲ್ಮೇಶ ಬಡಿಗೇರ, ಅಶೋಕ ರಾಠೋಡ, ಆಕಾಶ ರಾಮತೀರ್ಥ, ಶಶಿ ದೊಡಮನಿ, ಶಿವರಂಜನಿ, ವೈಷ್ಣವಿ ಆನ್‌ಲೈನ್‌ ಚಳವಳಿಯಲ್ಲಿ ಭಾಗವಹಿಸಿದ್ದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು