ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಾಲ್ಲೂಕು ಆಡಳಿತ ಸೌಧ ಮೂಲ ಸೌಕರ್ಯದ ಕೊರತೆ ಅನುಭವಿಸುತ್ತಿದೆ.

ಕಚೇರಿಗೆ ಬರುವ ಸಾರ್ವಜನಿಕರಿಗೆ ಕುಳಿತು ಕೊಳ್ಳಲು ಆಸನ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳು ಇಲ್ಲದೇ ಇರುವುದರಿಂದ ತೊಂದರೆಯಾಗಿದೆ.

ತಹಶೀಲ್ದಾರ್ ಕಚೇರಿಗೆ ಕೆಲಸಕ್ಕೆ ಬರುವ ಜನರಿಗೆ ಕುಡಿಯಲು ನೀರಿಲ್ಲ, ಇದ್ದ ವಾಟರ್ ಫಿಲ್ಟರ್ ಹಾಳಾಗಿ ಹಲವು ವರ್ಷಗಳು ಕಳೆದಿವೆ. ಇಲ್ಲಿಯವರೆಗೆ ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ಮಾಡದಿರುವುದು ದುರದೃಷ್ಟಕರ ಎಂದು ಸ್ಥಳೀಯರಾದ ಉದಯಸಿಂಗ ರಾಯಚೂರು ಆರೋಪಿಸಿದ್ದಾರೆ.

ನಿತ್ಯ ಸಾವಿರಾರು ಜನ ತಮ್ಮ ಕೆಲಸಕಾರ್ಯಗಳನ್ನು ಮಾಡಿಕೊಳ್ಳಲು ತಹಶೀಲ್ದಾರ್ ಕಚೇರಿಗೆ ಬರುತ್ತಾರೆ. ಆದರೆ, ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ವಿಶೇಷವಾಗಿ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ, ಪುರುಷರು ಕಚೇರಿಯ ಸುತ್ತಮುತ್ತಲು ಬಯಲಿನಲ್ಲಿ ಮೂತ್ರ ಮಾಡುತ್ತಾರೆ. ಆದರೆ ಮಹಿಳೆಯರು ಎನು ಮಾಡಬೇಕು,ಇದಕ್ಕೆ ತಹಶೀಲ್ದಾರ್ ಅವರು ತುರ್ತಾಗಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದರು.

ತಹಶೀಲ್ದಾರ್ ಕಚೇರಿಯಲ್ಲಿ ಉಪ ನೊಂದಣಿ ಕಚೇರಿ ಇದ್ದು, ನೂರಾರು ಜನ ಕುಟುಂಬ ಸಮೇತ ಆಸ್ತಿ ಖರೀದಿ, ನೋಂದಣಿಗೆ ಬರುತ್ತಾರೆ. ಅವರಿಗೆ ಈ ಮೂಲ ಸೌಕರ್ಯಗಳ ಅವಶ್ಯಕತೆ ಹೆಚ್ಚಾಗಿದೆ, ಬಿರು ಬಿಸಿಲು ಇರುವುದರಿಂದ ವಿಜಯಪುರ ಜಿಲ್ಲಾ ಅಧಿಕಾರಿಗಳು ತಕ್ಷಣ ಮುದ್ದೇಬಿಹಾಳ ತಹಶೀಲ್ದಾರ್ ಕಚೇರಿಯಲ್ಲಿ ಇರುವ ಈ ಮೂಲಭೂತ ಸೌಕರ್ಯದ ಕೊರತೆಯನ್ನು ಸರಿಪಡಿಸಲು ಆದ್ಯತೆ ನೀಡಬೇಕು ಎಂದು ಉದಯ ರಾಯಚೂರು ಮನವಿ ಮಾಡಿದರು.

ಸ್ವಚ್ಛತೆಗೆ ಆದ್ಯತೆ: ಕಚೇರಿ ಕೆಲಸಕ್ಕೆ ಬರುವ ಕೆಲವು ಜನ ತಂಬಾಕು, ಗುಟ್ಕಾಗಳನ್ನು ತಿಂದು ಎಲ್ಲಿ ಬೇಕೆಂದರಲ್ಲಿ ಉಗುಳಿ ಕಚೇರಿಯ ಮೆಟ್ಟಿಲುಗಳ ಮೂಲೆಗಳಲ್ಲಿ, ಆವರಣದಲ್ಲಿ ಗಲಿಜು ಮಾಡುತ್ತಾರೆ. ಅಂತವರಿಗೆ ಎಚ್ಚರಿಕೆ ನಾಮ ಫಲಕಗಳನ್ನು ತಾಲ್ಲೂಕು ಆಡಳಿತ ಹಾಕುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಮತ್ತು ಕಚೇರಿಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುದ್ದೇಬಿಹಾಳದಲ್ಲಿ ಇರುವ ತಾಲ್ಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ ಕಚೇರಿ ಮಾತ್ರವಲ್ಲದೆ, ಆಹಾರ ಇಲಾಖೆ, ನೋಂದಣಿ ಇಲಾಖೆ, ಸಿ.ಟಿ ಸರ್ವೆ, ಚುನಾವಣೆ ವಿಭಾಗ, ಆಧಾರ್ ಮತ್ತು ಪಿಂಚಣಿ ವಿಭಾಗ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿಭಾಗ ಸೇರಿದಂತೆ ಹಲವು ಕಚೇರಿಗಳು ಇದ್ದು, ಅವುಗಳಿಗೆ ಸಾವಿರಾರು ಜನ ಸಾರ್ವಜನಿಕರು ನಿತ್ಯ ಅಲೆದಾಡುತ್ತಾರೆ. ಅವರಿಗಾಗಿ ಈ ಮೂಲ ಸೌಕರ್ಯಗಳನ್ನು ಬೇಗನೆ ಒದಗಿಸಲು ರಾಯಚೂರ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-26-141333358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.