ಮುದ್ದೇಬಿಹಾಳ: ತಾಲೂಕಿನ ಚವನಬಾವಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಅತ್ಯಂತ ಅಪರೂಪದ ಧಾರ್ಮಿಕ ಸಂಪ್ರದಾಯವಾದ ಗದ್ದೆಮ್ಮದೇವಿ ಹಾಗೂ ದ್ಯಾಮವ್ವದೇವಿ ತಾಯಿಯವರ ಸಮಾಗಮ ಮತ್ತು ಬೀಳ್ಕೊಡುಗೆ ಸಮಾರಂಭ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಅದ್ದೂರಿಯಾಗಿ ನೆರವೇರಿತು.

ಗ್ರಾಮದ ಪುರಾತನ ಪದ್ಧತಿಯಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಈ ಉಭಯ ದೇವಿಯರ ಭೇಟಿ ಜರುಗುತ್ತದೆ.

ಈ ಬಾರಿಯೂ ಸಹ ಭಕ್ತರು ಸಕಲ ಸಿದ್ಧತೆಗಳೊಂದಿಗೆ ದೇವಿಯರ ಉತ್ಸವಕ್ಕೆ ಚಾಲನೆ ನೀಡಿದರು. ಗ್ರಾಮದ ಗಡಿಯಿಂದ ಆರಂಭವಾದ ಈ ಮೆರವಣಿಗೆಯು ಭಕ್ತಿಯ ಪರಾಕಾಷ್ಠೆಯನ್ನು ತಲುಪಿತು.

ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ ಮತ್ತು ವಿವಿಧ ಜಾನಪದ ವಾದ್ಯಗಳ ಮೇಳಗಳು ಭಕ್ತರಲ್ಲಿ ಸಂಭ್ರಮದ ಅಲೆ ಎಬ್ಬಿಸಿದವು. ಸುಮಂಗಲೆಯರು ಸಾಲಾಗಿ ನಿಂತು ದೇವಿಯರಿಗೆ ಆರತಿ ಬೆಳಗಿ, ಕಂಕಣ ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಹಳದಿ ಮತ್ತು ಕೇಸರಿ ಪೇಟಗಳನ್ನು ಧರಿಸಿದ ಯುವಕರ ‘ಜೈಕಾರ’ ಗ್ರಾಮದ ತುಂಬೆಲ್ಲಾ ಪ್ರತಿಧ್ವನಿಸಿತು. ದೇವಿಯರ ಉತ್ಸವ ಮೂರ್ತಿಗಳನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.

ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಮತ್ತು ಭಾವುಕ ಘಟ್ಟವೆಂದರೆ ಅದು ಗದ್ದೆಮ್ಮದೇವಿ ಮತ್ತು ದ್ಯಾಮವ್ವದೇವಿಯರ ಮಿಲನ. ಇಬ್ಬರು ದೇವಿಯರು ಪರಸ್ಪರ ಜೊತೆಗೆ ಅಪ್ಪಿಕೊಳ್ಳುವ ಕ್ಷಣವನ್ನು ನೋಡಲು ಭಕ್ತರು ಮುಗಿ ಬಿದ್ದರು.

ನಂತರ ದ್ಯಾಮವ್ವದೇವಿಯು ಅಡವಿ ಹುಲಗಬಾಳ ಗ್ರಾಮದತ್ತ ಪ್ರಯಾಣ ಬೆಳೆಸಿದರು. ಗದ್ದೆಮ್ಮದೇವಿಯು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದರು. ಭಕ್ತರು ದೇವಿಯ ಆಶೀರ್ವಾದಗಳನ್ನು ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-26-492059580

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.