ಮುದ್ದೇಬಿಹಾಳ: ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಟಿ.ಸಿ ಹಾಳಾಗಿ, ಅನೇಕ ದಿನಗಳಾದರೂ ದುರಸ್ತಿಯಾಗದೇ ಇಡೀ ಗ್ರಾಮವೇ ಕತ್ತಲಲ್ಲಿ ಮುಳುಗಿದೆ.

ಗ್ರಾಮದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಹೊಸದೇನಲ್ಲ. ಕಳೆದ 15 ದಿನಗಳಿಂದ ಸರ್ಕಾರಿ ಶಾಲೆ ಮುಂದಿನ ಟಿಸಿಯಲ್ಲಿ ಪದೇ ಪದೇ ಡಿವಲ್ ಹೋಗುತ್ತಿತ್ತು. ಅದೀಗ ಸಂಪೂರ್ಣವಾಗಿ ಸುಟ್ಟು ಮೂರು ದಿನ ಕಳೆದಿದೆ. ಗ್ರಾಮದ ಆಂಜನೇಯ ದೇವಸ್ಥಾನದ ಮುಂದಿನ ಮತ್ತೊಂದು ಟಿಸಿ ಸುಟ್ಟು ಬರೋಬ್ಬರಿ ಮೂರು ತಿಂಗಳು ಕಳೆದಿದೆ. ಆದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಬಸವರಾಜ ಕುಂಬಾರ ಆರೋಪಿಸಿದರು.

ಹೆಸ್ಕಾಂ ಶಾಖಾಧಿಕಾರಿಗಳಿಗೆ ಗ್ರಾಮಸ್ಥರು ಫೋನ್ ಮಾಡಿ ಗೋಗರೆದರೂ ಸೌಜನ್ಯಕ್ಕೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಬಸವರಾಜ ದೂರಿದರು. ಹೊಸ ಟಿಸಿಗಳನ್ನು ಅಳವಡಿಸಿ ವಿದ್ಯುತ್ ಪೂರೈಕೆ ಸರಿಪಡಿಸದಿದ್ದರೆ, ಹೆಸ್ಕಾಂ ಶಾಖಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-26-668974897

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.