ಮುದ್ದೇಬಿಹಾಳ: ಯುದ್ಧದ ಬಿಸಿ ತಾಲ್ಲೂಕಿಗೂ ತಟ್ಟಿದ್ದು, ಸಿಲಿಂಡರ್ ಹಾಗೂ ಸರಕು ಸಾಗಾಣಿಕೆಯಲ್ಲಿ ವ್ಯತ್ಯಾಸವಾದ ಹಿನ್ನೆಲೆ ಮುದ್ದೇಬಿಹಾಳದಲ್ಲಿ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದೆ.

ಸಿಲಿಂಡರ್ಗಾಗಿ ಪಟ್ಟಣದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಕಚೇರಿಯಲ್ಲಿ ಬುಕ್ ಮಾಡಲು ಜನರು ಮುಗಿ ಬಿದ್ದಿದ್ದು ಮಂಗಳವಾರ ಕಂಡು ಬಂದಿತು.

ಒಂದು ಸಿಲಿಂಡರ್ ತೆಗೆದುಕೊಂಡ ಮೇಲೆ 25 ದಿನಕ್ಕೆ ಸಿಲಿಂಡರ್ಗಾಗಿ ಆನ್ಲೈನ್ ಬುಕಿಂಗ್ ಮಾಡುವ ವ್ಯವಸ್ಥೆ ಕಡ್ಡಾಯ ಮಾಡಿರುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗಿದೆ. ಗೃಹ ಬಳಕೆಗೆ ಅಷ್ಟೊಂದು ಅಭಾವ ಇಲ್ಲದಿದ್ದರೂ ಹೋಟೆಲ್, ರೆಸ್ಟೋರೆಂಟ್ ಉದ್ದಿಮೆಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಗ್ಯಾಸ್ ದರ ಕೂಡ ಹೆಚ್ಚಾಗಿರುವುದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಅಧಿಕಾರಿಗಳಿಂದ ದಾಳಿ: ಗ್ಯಾಸ್ ಸಿಲಿಂಡರ್ ಅಭಾವ ಹೆಚ್ಚಾದ್ದರಿಂದ ಗೃಹ ಬಳಕೆಯ ಸಿಲಿಂಡರ್ಗಳನ್ನು ಹೋಟೆಲ್ ರೆಸ್ಟೋರೆಂಟ್ಗಳಲ್ಲಿ ಬಳಸುತ್ತಿದ್ದು, ಅದರಿಂದ ಗೃಹ ಬಳಕೆಗೆ ಅಭಾವ ಆಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ ಪ್ರತಿಯೊಂದು ಹೋಟೆಲ್ಗಳ ಮೇಲೆ ಆಹಾರ ಇಲಾಖೆಯ ಅಧಿಕಾರಿ ಶಂಕರ ಗುಮತಿಮಠ ಅವರ ನೇತೃತ್ವದಲ್ಲಿ ದಾಳಿ ಮಾಡಿ ಗೃಹ ಬಳಕೆಯ ಸಿಲಿಂಡರ್ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.

‘ಸಿಲಿಂಡರ್ ಅಭಾವ ಮತ್ತು ದರ ಏರಿಕೆಯಿಂದ ವ್ಯಾಪಾರ ಮಾಡಲು ತೊಂದರೆ ಆಗುತ್ತಿದೆ. ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದೇವೆ. ಸಿಲಿಂಡರ್ ಸರಿಯಾಗಿ ಸಿಗದೆ ಹೋದಲ್ಲಿ ನಷ್ಟ ಅನುಭವಿಸುತ್ತೇವೆ’ ಎಂದು ಹೋಟೆಲ್ ಮಾಲೀಕ ಸದಾಶಿವ ಮಠ ಸಿದ್ದೇಶ್ವರ ತಿಳಿಸಿದರು.

‘ಸಿಲಿಂಡರ್ ಅಭಾವ ಹೆಚ್ಚಾಗಿದೆ, ವಾರಕ್ಕೆ ಒಂದು ವಾಣಿಜ್ಯ ಬಳಕೆ ಸಿಲಿಂಡರ್ ನೀಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ನಮಗೆ ವ್ಯಾಪಾರ ಮಾಡುವುದು ಕಷ್ಟ ಆಗುತ್ತದೆ’ ಎಂದು ಮುದ್ದೇಬಿಹಾಳ ಸಾಗರ ಹೋಟೆಲ್ ಮಾಲೀಕ ಧನರಾಜ ಶೆಟ್ಟಿ ಕೀರ್ತಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-26-1998350665

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.