ಮುದ್ದೇಬಿಹಾಳ: ನೀರು ಸ್ವಚ್ಛವಾಗಿದ್ದರೂ, ಸಂಗ್ರಹವಾಗಿ ಬಹಳ ದಿನವಾಗಿದ್ದರೆ, ಅಂತಹ ನೀರಿನಲ್ಲಿ ಲಾರ್ವಾ ಸೊಳ್ಳೆಗಳು ಉತ್ಪತ್ತಿಯಾಗಿ ಅದರಿಂದ ಡೆಂಗಿ ಹರಡುತ್ತದೆ. ಅದು ಹರಡದಂತೆ ಮುನ್ನೆಚ್ಚರಿಕೆಯಾಗಿ ನೀರು ಸಂಗ್ರಹ ಡ್ರಮ್ ಮೇಲೆ ಮುಚ್ಚಳ ಮುಚ್ಚಬೇಕು ಎಂದು ಆರೋಗ್ಯ ಇಲಾಖೆಯ ಪಿಎಚ್ಸಿಒ ಆರೋಗ್ಯ ಕೇಂದ್ರ ಗರಸಂಗಿಯ ಮಾಶಾಬಿ ಟಪಾಲ ಹೇಳಿದರು.

ಅವರು ಶನಿವಾರ ಉಪ ಕೇಂದ್ರದ ಶಿರೋಳ ಗ್ರಾಮದಲ್ಲಿ ರಾಷ್ಟ್ರೀಯ ಡೆಂಗಿ ದಿನದ ಪ್ರಯುಕ್ತವಾಗಿ ಮನೆ ಮನೆಗೆ ತೆರಳಿ ಲಾರ್ವ ಸೊಳ್ಳೆಗಳು ಉತ್ಪತ್ತಿಯಾಗದಂತೆ, ಮನೆಯ ಮುಂದೆ, ಡ್ರಮ್, ಪೈಪ್, ಪ್ಲಾಸ್ಟಿಕ್ ಡಬ್ಬಿಯಲ್ಲಿ ನೀರು ಸಂಗ್ರಹ ಮಾಡಿದರೂ ಅದನ್ನು ಸರಿಯಾಗಿ ಮುಚ್ಚಬೇಕು, ಮನೆಯ ನಿವಾಸಿಗಳು ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಅದರಿಂದ ಲಾರ್ವಾ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗಿ ಬರುತ್ತದೆ ಎಂದು ಅವರು ಜಾಗೃತಿ ಮೂಡಿಸುವ ಮೂಲಕ ಶಿರೋಳ ಗ್ರಾಮದಲ್ಲಿ ಪ್ರತಿ ಮನೆ ಮನೆಗೆ ತೆರಳಿ ವೀಕ್ಷಣೆ ಮಾಡಿದರು.

ಈ ವೇಳೆ ಆಶಾ ಕಾರ್ಯಕರ್ತೆ ಬಸಮ್ಮ ಎಸ್. ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-26-427445431

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.