ಮುದ್ದೇಬಿಹಾಳ: ವಿದೇಶಗಳಲ್ಲಿ ಬೆಳೆಯುವ ಸುಮಾರು 30 ಬಗೆಯ ಹಣ್ಣುಗಳನ್ನು ತಮ್ಮ ಹೊಲದಲ್ಲಿ ಸಾವಯವ ಕೃಷಿ ಪದ್ದತಿ ಮೂಲಕ ಬೆಳೆಯುವ ಮೂಲಕ ಮುದ್ದೇಬಿಹಾಳ ಪಟ್ಟಣದ ರೈತ ರಾಜೇಂದ್ರ ಭೋಸಲೆ ಮತ್ತು ರವಿಂದ್ರ ಭೋಸಲೆ ಸಹೋದರರು ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಹಡಲಗೇರಿ ಗ್ರಾಮದ ಹೊರ ವಲಯದಲ್ಲಿ ಸುಮಾರು 13 ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಮಾಡುವ ಮೂಲಕ ಸಹೋದದರು ಯಶಸ್ವಿಯಾಗಿದ್ದಾರೆ.

ಹುಣಸೆ ಹಣ್ಣು: ವಿಶೇಷವಾದ ತಳಿಯ 100 ಹುಣಸೆ ಹಣ್ಣಿನ ಗಿಡಗಳನ್ನು ನೆಡಲಾಗಿದೆ, ಅವುಗಳನ್ನು ಕೂಡ ರಾಸಾಯನಿಕ ಮುಕ್ತವಾಗಿ ಬೆಳೆಯಲಾಗುತ್ತಿದೆ.

ರೆಡ್ ಸೀತಾಫಲ ಹಣ್ಣುಗಳ 100 ಗಿಡಗಳನ್ನು ಬೆಳೆಯಲಾಗಿದೆ. ಮುಖ್ಯವಾಗಿ ದಾಳಿಂಬೆ ಹಣ್ಣಿನ ಬೆಳೆ ಇದ್ದು ಅದು ಮೂರು ಎಕರೆ ಪ್ರದೇಶದಲ್ಲಿ ಇವೆ. ಅವುಗಳಿಂದ ₹35 ಲಕ್ಷ ಆದಾಯ ಪಡೆದುಕೊಂಡಿದ್ದಾರೆ.

ಬಾಳೆ, ಅಡಿಕೆ ಬೆಳೆ: ಇಂದು ಸಾವಿರ ಬಾಳೆ ಹಣ್ಣಿನ ಗಿಡಗಳ ಜೊತೆ 3-4 ವರ್ಷದ ಅಡಿಕೆ ಮರಗಳನ್ನು ಬೆಳೆದಿದ್ದಾರೆ. ಅವು ಕೂಡ ಸಾವಯವವಾಗಿ ಬೆಳೆಯಲಾಗುತ್ತಿದೆ.

ಮಾವಿನ ಮರಗಳು: ಸುಮಾರು 200 ಮಾವಿನ ಮರಗಳನ್ನು ಸಾವಯುವವಾಗಿ ಬೆಳೆದಿದ್ದೇವೆ, ಅದರಲ್ಲಿ 100 ಆಪೂಸ್ ಮಾವಿನ ಮರಗಳು, 100 ಕೇಸರ ಮತ್ತು ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತಿದೆ.

ಗೋಡಂಬಿ ಬೆಳೆ: ಸುಮಾರು 15 ವರ್ಷದಿಂದ 20 ಕಾಸರಗೋಡು ಗೋಡಂಬಿ ಗಿಡಗಳನ್ನು ಬೆಳೆದಿದ್ದು, ಅದರಲ್ಲಿಯೂ ಕೂಡ ಯಶಸ್ಸು ಕಂಡಿದ್ದೇವೆ. ಜನರಲ್ಲಿ ಈ ಬೆಳೆ ಉತ್ತರ ಕರ್ನಾಟಕದಲ್ಲಿ ಬರುವುದಿಲ್ಲ ಎಂಬ ನಂಬಿಕೆ ಇದೆ. ಆದರೆ, ನಾವು ಅದನ್ನು ಬೆಳೆದಿದ್ದೇವೆ ಎಂದು ಹೇಳಿದರು.

ಅರಿಸಿನ ಬೆಳೆ: ಅರಿಸಿನ ಅಗಿಗಳನ್ನು ನೆಟ್ಟು ಅದರಿಂದ ಶುದ್ಧವಾದ ಅರಿಶಿನದ ಬೆಳೆಗಳನ್ನು ಕೂಡ ಬೆಳೆದಿದ್ದು, ಬೇರೆ ಯಾರಿಗೂ ಅರಿಶಿನದ ಸಸಿಗಳು ಬೇಕಾದರೂ ಕೂಡ ಸಿಗುತ್ತವೆ ಎಂದರು.

ಸುಮಾರು 20 ವರ್ಷದಿಂದ 1500 ಶ್ರೀಗಂಧದ ಮರಗಳನ್ನು ಬೆಳೆಯುತ್ತಿದ್ದೇವೆ. ಆದರೆ, ಅದಕ್ಕೆ ಕಳ್ಳರ ಹಾವಳಿ ಹೆಚ್ಚು, ಆದ್ದರಿಂದ ಆ ಶ್ರೀಗಂಧದ ಮರ ಒಂದು ಮುಖ್ಯ ಬೆಳೆಯಾಗಿ ಬೆಳೆಯ ಬಾರದು ಅದರೊಂದಿಗೆ ಪ್ರಾಯೋಗಿಕವಾಗಿ ಬೇರೆ ಬೆಳೆಗಳನ್ನು ಬೆಳೆಯಬೇಕು ಎಂದು ರೈತರಿಗೆ ಕಿವಿ ಮಾತು ಹೇಳಿದರು.

ರಕ್ತ ಚಂದನ: ಸುಮಾರು ಎರಡು ಸಾವಿರ ರಕ್ತ ಚಂದನದ ಗಿಡಗಳನ್ನು ನೆಟ್ಟಿದ್ದಾರೆ. ಆರು ವರ್ಷದಿಂದ ಅವುಗಳು ಪಾಲನೆ ಮಾಡುತ್ತಿದ್ದಾರೆ. 15 ರಿಂದ 18 ವರ್ಷಗಳಲ್ಲಿ ಬೆಳೆ ಬರಲಿದೆ. ಇದರಿಂದ 1 ಟನ್ಗೆ ಸುಮಾರು ₹ 50 ಲಕ್ಷ ಮಾರುಕಟ್ಟೆಯಲ್ಲಿ ದರ ಇದೆ ಎಂದು ಮಾಹಿತಿ ನೀಡಿದರು.

ಸಾಗುವಾನಿ: 20 ವರ್ಷಗಳಿಂದ 13 ಎಕರೆ ಪ್ರದೇಶದಲ್ಲಿ ದಾಂಡೇಲಿ ಸಾಗುವಾನಿ ಮರಗಳನ್ನು ಬೆಳೆಯುತ್ತಿದ್ದೇವೆ. ಅವುಗಳು 40 ರಿಂದ 45 ಅಡಿ ಬೆಳೆದಿವೆ. ಈಗ ಕಟಾವು ಹಂತಕ್ಕೆ ಬಂದಿವೆ. ಅರಣ್ಯ ಅಧಿಕಾರಿಗಳಿಂದ ಅನುಮತಿ ಪಡೆದು ಅವುಗಳನ್ನು ಮಾರಾಟ ಮಾಡುವ ಹಂತದಲ್ಲಿ ಈಗ ಇದ್ದೇವೆ. ಅದರ ಬೆಲೆ ಈಗ ಅಡಿಗೆ ₹6 ಸಾವಿರದಿಂದ ₹8 ಸಾವಿರ ವರೆಗೆ ಇದೆ. ಒಂದು ಮರ 40 ಅಡಿ ಬೆಳೆದರೆ ಅದರಿಂದ ಒಂದು ಮರಕ್ಕೆ ₹1 ಲಕ್ಷದ ವರೆಗೆ ಆದಾಯ ಬರುತ್ತದೆ ಎನ್ನುತ್ತಾರೆ ಅವರು.

ಬೇವಿನ ಎಣ್ಣೆ ಕಾರ್ಖಾನೆ: ಭೋಸಲೆ ಮನೆತನದ ಬೇವಿನ ಎಣ್ಣೆಯ ಮಿಲ್ ಸುಮಾರು 50 ವರ್ಷದಿಂದ ಕಾರ್ಯ ರೂಪದಲ್ಲಿದೆ. ಅದರಿಂದ ಬೇವಿನ ಎಣ್ಣೆ ಉತ್ಪಾದನೆ ಮಾಡುತ್ತಿದ್ದೇವೆ. ಬೇವಿನ ಎಣ್ಣೆ ಮತ್ತು ಅದರ ಫೌಡರ್ ಬೇಕಾದರೆ ಇಂದಿಗೂ ನಮ್ಮಲ್ಲಿ ಸಿಗುತ್ತದೆ ಎನ್ನುತ್ತಾರೆ ಅವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-26-496525300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.