ಸಾಗರಕುಮಾರ ಎಂ ಉಕ್ಕಲಿ

ಮುದ್ದೇಬಿಹಾಳ: ಸುಮಾರು 6 ವರ್ಷ ಕಳೆದರೂ ಸ್ಥಳೀಯ ನಿವಾಸಿಗಳಿಗೆ ಸ್ಪಂದಿಸದ ಅಧಿಕಾರಿಗಳು, ಮುದ್ದೇಬಿಹಾಳ ಪಟ್ಟಣದ ಮಾರುತಿನಗರದ ಜಿಲ್ಲಾ ಪಂಚಾಯಿತಿ ವಸತಿ ಗೃಹದ ಹಿಂಭಾಗ ಇರುವ 3 ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ.

ಐದು ವರ್ಷಗಳ ಹಿಂದೆ ಸಮತಲವಾಗಿ ಇದ್ದ ರಸ್ತೆಯನ್ನು ಅಗೆದು ಒಳಚರಂಡಿ ನಿರ್ಮಾಣ ಮಾಡಿ, ಅದು ಕೂಡ ಪೂರ್ಣ ಮಾಡದೆ ಅರ್ಧದಲ್ಲಿ ನಿಂತಿದೆ. ಇದರಿಂದ ಕಲ್ಲುಗಳು ತುಂಬಿದ ಕಚ್ಚಾ ರಸ್ತೆ ನಿರ್ಮಾಣವಾಗಿದೆ.

ಇಲ್ಲಿ ನೂರಾರು ಮನೆಗಳು ಇದ್ದು, ಪ್ರತಿನಿತ್ಯ ನಿವಾಸಿಗಳಿಗೆ ತಿರುಗಾಡಲು ತೊಂದರೆ ಆಗುತ್ತಿದೆ. ವಾಹನಗಳು ಹೋಗುವುದು ಇರಲಿ, ಮಕ್ಕಳು, ವಯೋವೃದ್ದರು ತಿರುಗಾಡುವುದು ಕಷ್ಟವಾಗಿದೆ. ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಬೀಳುತ್ತಾರೆ, ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದು ದುಸ್ತರವಾಗಿದೆ.

‘ಈಗಾಗಲೇ ಅಧಿಕಾರಿಗಳಿಗೆ ಜನ ಪ್ರತಿನಿಧಿಗಳಿಗೆ ಹೇಳಿ ಸಾಕಾಗಿದೆ. ಚುನಾವಣೆ ಬಂದ ಸಂದರ್ಭದಲ್ಲಿ ಮತ ಕೇಳಲು ಮನೆ ಬಾಗಿಲಿಗೆ ಬರುವ ಜನ ಪ್ರತಿನಿಧಿಗಳು ಚುನಾವಣೆ ನಂತರ ನಾವು ಅವರ ಮನೆ ಬಾಗಿಲಿಗೆ ಸಮಸ್ಯೆ ಪರಿಹಾರ ಮಾಡುವಂತೆ ಹೋದರೂ ಸಿಗುವುದಿಲ್ಲ. ನಮ್ಮ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಸಮತಲವಾಗಿ ರಸ್ತೆ ಇದ್ದರೆ ಸ್ವಲ್ಪ ಮಟ್ಟಿಗೆ ನಿರಾಳ ಇರುತ್ತಿತ್ತು. ಆದರೆ, ಇಲ್ಲಿ ಎತ್ತರದ ಪ್ರದೇಶ ಇರುವುದರಿಂದ ನಮಗೆ ಬಹಳಷ್ಟು ತೊಂದರೆ ಆಗುತ್ತಿದೆ. ಇಳಿಜಾರು ಹೆಚ್ಚಾಗಿದೆ. ಶೀಘ್ರವಾಗಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಕೊಡಬೇಕು’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-26-2001400024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.