ಮುದ್ದೇಬಿಹಾಳ: ಸ್ವಂತ ಪ್ರಯತ್ನದ ಮೇಲೆ ಬೀರಲಿಂಗೇಶ್ವರ ಮತ್ತು ಕಾಡಸಿದ್ದೇಶ್ವರ ಗುಡಿಗಳನ್ನು ಕಟ್ಟಿರುವುದು ಪ್ರಶಂಸನೀಯ. ವೈಭವದಿಂದ ಜಾತ್ರೆ, ಸರ್ವಧರ್ಮದ ಸಭೆ ಹಾಗೂ ಉಚಿತ ಸಾಮೂಹಿಕ ವಿವಾಹ ಆಯೋಜಿಸಿರುವುದು ಸ್ವಾಗತಾರ್ಹ ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ತಾಲ್ಲೂಕಿನ ಖಿಲಾರಹಟ್ಟಿಯಲ್ಲಿ ಈಚೆಗೆ ನಡೆದ ಜಾತ್ರೆ, ಸಾಮೂಹಿಕ ವಿವಾಹ, ಧರ್ಮಸಭೆಯಲ್ಲಿ ಮಾತನಾಡಿದರು.

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ 22 ಜೋಡಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ರೂವಾರಿ ಮಲ್ಲಿಕಾರ್ಜುನ ಎನ್. ಮದರಿ, ಸಮಾಜ ಸೇವಕ ಶಾಂತಗೌಡ ಪಾಟೀಲ ಮಾತನಾಡಿ, ‘ನಾವು ನಮ್ಮ ಸ್ವಂತ ಬಲದ ಮೇಲೆ ಬೆಳೆಯಬೇಕು. ಯಾರನ್ನೂ ಯಾರೂ ಬೆಳೆಸುವುದಿಲ್ಲ’ ಎಂದರು.

ಸಾನ್ನಿಧ್ಯ ವಹಿಸಿದ್ದ ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ, ರೇವಣಸಿದ್ದೇಶ್ವರ ಅಗತೀರ್ಥ ಸ್ವಾಮೀಜಿ, ಖಾಸ್ಗತ ಸಿದ್ಧಲಿಂಗ ದೇವರು, ಮಲ್ಲಾಲಿಂಗ್ ಮಹಾರಾಜರು ಆಶೀರ್ವಚನ ನೀಡಿದರು.

ವಿವಿಧ ಸ್ವಾಮೀಜಿಗಳು, ಮುಖಂಡರಾದ ಗಂಗಾಧರ ನಾಡಗೌಡ, ಬಿ.ಜಿ.ಜಗ್ಗಲ್, ಬಿ.ಕೆ.ಬಿರಾದಾರ, ಕೆಂಚಪ್ಪ ಬಿರಾದಾರ, ವೈ.ಎಚ್.ವಿಜಯಕರ, ಸಂಗಮ್ಮ ದೇವರಳ್ಳಿ, ಕಿರಣ ಮದರಿ, ಮಲ್ಲು ಅಪರಾಧಿ ಸೇರಿದಂತೆ ನೂತನ ವಧು ವರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-26-181879417

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.