ಮುದ್ದೇಬಿಹಾಳ: ತಾಲ್ಲೂಕಿನ ನಾಗರಬೆಟ್ಟ ಗ್ರಾಮದ ಹತ್ಯೆಯಾದ ಯುವಕ ರವಿಚಂದ್ರ ಮಾದರ ಮನೆಗೆ ಡಿ.ಸಿ.ಆರ್.ಇ ಇಲಾಖೆಯ ಬೆಳಗಾವಿ ಎಸ್ಪಿ ಶ್ರೀನಾಥ್ ಜೋಶಿ, ಡಿವೈಎಸ್ಪಿ ಸಂದೀಪ್ ಸಿಂಗ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೊದ್ದಾರ, ಅಪರ ಜಿಲ್ಲಾಧಿಕಾರಿ ಔದರಾಮ, ಅಂಬೇಡ್ಕರ್ ನಿಗಮದ ಡಿ.ಎಮ್ ಸಂಗನಗೌಡ ಪಾಟೀಲ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿತು.

ಈ ವೇಳೆ ಕುಟುಂಬಸ್ಥರೊಂದಿಗೆ ಮಾತನಾಡಿದ ಅಧಿಕಾರಿಗಳು, ವಿಶೇಷ ತಂಡ ರಚನೆ ಮಾಡಿ ಆರೋಪಿಗಳನ್ನು ಬಂಧಿಸಿ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು. ಈಗ ₹4,12,500 ಚೆಕ್ ವಿತರಿಸಲಾಗಿದೆ. ಚಾರ್ಜ್ ಶೀಟ್ ಆದ ನಂತರ ಮತ್ತೆ ₹4,12,500 ಚೆಕ್ ನೀಡಲಾಗುತ್ತದೆ. ಮೃತರ ಸಹೋದರನಿಗೆ ಡಿ.ದರ್ಜೆಯ ನೌಕರಿ ನೀಡಲು ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಸಂತಿ ಮಠ, ಪಿಎಸ್ಐ ಸಂಜಯ ತಿಪರೆಡ್ಡಿ, ಡಿಸಿಆರ್ಇ ಹೆಡ್ ಕಾನಸ್ಟೇಬಲ್ ವಾಮನರಾವ, ಮೃತನ ತಂದೆ ದೇವಪ್ಪ ಮಾದರ, ದಲಿತ ಮುಖಂಡರಾದ ತಿಪ್ಪಣ್ಣ ದೊಡಮನಿ, ಸಿ.ಜಿ.ವಿಜಯಕರ, ಹರೀಶ್ ನಾಟಿಕಾರ, ಮಲ್ಲು ಬಿಜ್ಜೂರ, ಪ್ರಕಾಶ ಸರೂರ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-26-1448847526

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.