ಮುದ್ದೇಬಿಹಾಳ: ಪೊಲೀಸ್ ಇಲಾಖೆಯ ಮೇಲೆ ಮೊದಲು ನಂಬಿಕೆ ಇರಲಿ. ಕೊಲೆ ಆರೋಪ ಕುರಿತು ಈಗಾಗಲೇ ತನಿಖೆ ಪ್ರಗತಿ ಹಂತದಲ್ಲಿದೆ. ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಈಚೆಗೆ ಹತ್ಯೆಯಾದ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ರವಿಚಂದ್ರ ಮಾದರ ಮನೆಗೆ ಮಂಗಳವಾರ ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ಹತ್ಯೆ ನಡೆದ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ,ತಿಳಿಸಿ ಇನ್ನಷ್ಟು ತನಿಖೆಗೆ ಸಹಾಯ ಆಗುತ್ತದೆ, ಆದ್ದರಿಂದ ಯಾರು ಹೆದರುವ ಅವಶ್ಯ ಇಲ್ಲ.ಈಗಾಗಲೇ ಜಾರಿ ನಿರ್ದೇಶನಾಲಯ ಇಲಾಖೆಯಿಂದ ತನಿಖೆ ಆರಂಭವಾಗಿದೆ,ಎಂದರು. ತಿಪ್ಪಣ್ಣ ದೊಡಮನಿ, ಹರೀಶ್ ನಾಟಿಕಾರ,ಮಲ್ಲು ಬಿಜ್ಜೂರ,ಮೃತನ ತಂದೆ ಹುಲಗಪ್ಪ ಮಾದರ,ಚಂದಪ್ಪ ಮಾದರ,ಪೊಲೀಸ್ ಇಲಾಖೆಯ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ,ಸಿಪಿಐ ಮಹಮ್ಮದ್ ಫಸಿಯುದ್ಧಿನ, ಶರಣಗೌಡ ಗೌಡರ, ಪಿಎಸ್ಐ ಸಂಜಯ ತಿಪರೆಡ್ಡಿ,ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-26-611794723

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.