ಮುದ್ದೇಬಿಹಾಳ: ಕೋಳೂರ ಗ್ರಾಮ ಪಂಚಾಯತಿ ನರೇಗಾ ಯೋಜನೆಯಡಿ ಕೈಗೊಂಡಿರುವ ಸಿಡಿ ಹತ್ತಿರ ಉಪ್ಪಿನ್ ಹಳ್ಳಕ್ಕೆ ಹೊಳೆತ್ತುವ ಕಾಮಗಾರಿ ಸ್ಥಳಕ್ಕೆ ತಾಲ್ಲೂಕು ಪಂಚಾ ಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಗನಗೌಡ ಬಿರಾದಾರ ಭೇಟಿ ನೀಡಿದರು.

ಕೂಲಿಕಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಮತ್ತು ಕೆಲಸ ನಿರ್ವಹಣೆ ಕುರಿತು ಚರ್ಚಿಸಿದರು. ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಕುರಿತು ಖಾತ್ರಿಪಡಿಸಿ ಬೀಸಿಲಿನ ತಾಪ ಹೆಚ್ಚಿದ್ದು, ಬೆಳಗ್ಗೆ ಬೇಗ ಬಂದು ಕೆಲಸ ಮುಗಿಸಿ ತೆರಳಿ ಎಂದು ಸಲಹೆ ನೀಡಿದರು.

ನರೇಗಾ ಯೋಜನೆಯಡಿ ಎರಡು ತಿಂಗಳ ನಿರಂತರ ಕೆಲಸ ಕೊಡುತ್ತಿದ್ದು, ಮಾನವ ದಿನಗಳ ಸದುಪಯೋಗ ಪಡೆಯಬೇಕು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಗಂಡು ಹೆಣ್ಣಿಗೆ ಸಮಾನ ವೇತನ ನೀಡಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಕೆಲಸದ ಶೇ.30% ರಿಯಾಯಿತಿ ನೀಡಲಾಗಿದ್ದು, ಪೂರ್ತಿ ಕೂಲಿ ಹಣ ಪಾವತಿಸಲಾಗುವುದು. ದಿನಕ್ಕೆ ₹ 370 ಕೂಲಿ ನಿಗಧಿಪಡಿಸಲಾಗಿದೆ ಎಂದು ಹೇಳಿದರು.

ಕೋಳೂರ ಗ್ರಾಮ ಪಂಚಾಯತಿಗೆ ನರೇಗಾ ಕೂಲಿಕಾರರ ಬೇಡಿಕೆ ಆಧಾರಿತವಾಗಿ ಕೆಲಸ ನೀಡಲಾಗಿದೆ. ಇನ್ನು ಹೆಚ್ಚಿನ ಬೇಡಿಕೆ ಸಲ್ಲಿಕೆಯಾಗುತ್ತಿವೆ. ಬೇಡಿಕೆ ಸಲ್ಲಿಸಿದ ಎಲ್ಲರಿಗೂ ಕೆಲಸ ನೀಡುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಆಡಳಿತಾಧಿಕಾರಿ ಮಂಜುನಾಥ ಹಲಗಾರ, ಪಿಡಿಒ ಭರಮಣ್ಣ ಯಾತಗಿರಿ, ಕಾರ್ಯದರ್ಶಿ ರಂಗರಾಜು ಬಿ.ಆರ್., ನರೇಗಾ ತಾಲೂಕು ಐಇಸಿ ಸಂಯೋಜಕ ಪರಮೇಶ ಹೊಸಮನಿ, ಡಿಇಒ ರಾಚಯ್ಯ ಹಿರೇಮಠ, ಬಿಲ್ ಕಲೆಕ್ಟರ್ ಮಂಜುನಾಥ ಭಂಜತ್ರಿ ಹಾಗೂ ಗ್ರಾ.ಪಂ. ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-26-1370697076

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.