ಮುದ್ದೇಬಿಹಾಳ: ನೋಂದಣಿ ಇಲಾಖೆಯಿಂದ ಪೇಪರ್ ಲೆಸ್ ವ್ಯವಸ್ಥೆ ಜನರಿಗೆ ತಂದಿರುವುದನ್ನು ಖಂಡಿಸಿ ದಸ್ತು ಬರಹಗಾರರು ಬುಧವಾರ ತಹಶೀಲ್ದಾರ್ ಕೀರ್ತಿ ಚಾಲಕ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

‘ನಾವು ಸರ್ಕಾರದಿಂದ ಪರವಾನಗಿ ಪಡೆದು ಶತಮಾನದಿಂದ ಈ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ. ಆದರೆ ಸರ್ಕಾರ ಕಾವೇರಿ 2.0 ಮೂಲಕ ನೋಂದಣಿ ಇಲಾಖೆಯಲ್ಲಿ ಹಲವು ಬದಲಾವಣೆ ತಂದಿದೆ. ನಾವು ಟೈಪರೈಟಿಂಗ್, ಗಣಕೀಕರಣ ಮಾಡುತ್ತ ಬಂದಿದ್ದೇವೆ. ಸರ್ಕಾರಕ್ಕೆ ಕಂದಾಯ ಸಂಗ್ರಹ ವಾಗಲು ನಾವು ಪ್ರಮುಖ ಪಾತ್ರ ವಹಿಸುತ್ತೇವೆ. ಮುದ್ದೇಬಿಹಾಳ ತಾಲ್ಲೂಕಿನಿಂದ ಈ ವರ್ಷ ₹ 2ಕೋಟಿ ಹಣವನ್ನು ಸಂಗ್ರಹ ಮಾಡಿ ಕೊಟ್ಟಿದ್ದೇವೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅದೊಮ್ಮೆ ಕೈ ಕೊಟ್ಟರೆ ಎಲ್ಲ ದಾಖಲೆಗಳು ನಾಶ ಆಗುವ ಸಾಧ್ಯತೆ ಇರುತ್ತವೆ. ಈ ಪೇಪರ್ ಲೆಸ್ ವ್ಯವಸ್ಥೆ ಜಾರಿಗೆ ತರಲು ಹೊರಟಿರುವುದನ್ನು ಸರ್ಕಾರ ಹಿಂಪಡೆಯಬೇಕು. ಭೂ ಮಾಪಕರಿಗೆ ನೀಡುವ ಲಾಗಿನ್ ನಂತೆ ನಮಗೂ ಪ್ರತ್ಯೇಕ ಲಾಗಿನ್ ನೀಡಬೇಕು’ ಎಂದು ಒಂದು ದಿನದ ಲೇಖನಿ ಸ್ಥಗಿತಗೊಳಿಸಿ ಮನವಿ ಸಲ್ಲಿಸಿದರು.

ಮುದ್ದೇಬಿಹಾಳ ತಾಳಿಕೋಟಿ ತಾಲ್ಲೂಕಿನಲ್ಲಿದೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕೃತ ಪರವಾನಗಿ ಪಡೆದ ದಸ್ತುಬರಹಗಾರರ ಚಾರಿಟೇಬಲ್ ಟ್ರಸ್ಟ್ ಮುದ್ದೇಬಿಹಾಳ ಘಟಕದ ಪದಾಧಿಕಾರಿಗಳಾದ ಎಚ್.ಆರ್.ಬಾಗವಾನ, ರಾಜು ಜೋಳದ, ಆರ್.ಎಸ್. ಶಂಕಿನ್, ಎಚ್.ಎಸ್. ನಾಯ್ಕೋಡಿ, ಎಂ.ಎ. ಮುಲ್ಲಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-26-2026342504

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.