ಮುದ್ದೇಬಿಹಾಳ: ದೇಶಾದ್ಯಂತ ಔಷಧ ವ್ಯಾಪಾರಸ್ಥರಿಂದ ಕರೆ ನೀಡಿದ್ದ ಒಂದು ದಿನದ ಬಂದ್ಗೆ ನಗರದಲ್ಲಿ ಬುಧವಾರ ಬೆಂಬಲ ವ್ಯಕ್ತವಾಯಿತು. ತಾಲ್ಲೂಕು ಔಷಧ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಕೀರ್ತಿ ಚಾಲಕ ಅವರಿಗೆ ಮನವಿ ಸಲ್ಲಿಸಿದರು.

ಔಷಧ ವ್ಯಾಪಾರಸ್ಥರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಆರ್. ಎತ್ತಿನಮನಿ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಔಷಧ ವ್ಯಾಪಾರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗಿಲ್ಲ. ದೇಶದಾದ್ಯಂತ 12.40 ಲಕ್ಷಕ್ಕೂ ಅಧಿಕ ಔಷಧ ವ್ಯಾಪಾರಿಗಳು ಹಾಗೂ ಅವರ ಅವಲಂಬಿತರ ಜೀವನೋಪಾಯಕ್ಕೆ ಸಂಕಷ್ಟ ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಜಗದೀಶ ಹಿರೇಮಠ, ಉಪಾಧ್ಯಕ್ಷೆ ಕವಿತಾ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಶಿವು ಸಿದ್ದಾಪುರ, ಇಲಿಯಾಸ್ ಮಾಗಿ, ಸೋಮನಗೌಡ ಬಿರಾದಾರ, ರವಿ ಐವಳ್ಳಿ, ಮಲ್ಲಿಕಾರ್ಜುನ ಓತಗೇರಿ, ಮಂಜುನಾಥ್ ಹಿರೇಮಠ, ದಿನೇಶ್ ಲೋಕರೆ, ಎಚ್.ಎಸ್. ಪಾಟೀಲ, ಕುಮಾರಸ್ವಾಮಿ ಶಿವಯೋಗಿಮಠ, ಗೌರಿಶಂಕರ ಹಿರೇಮಠ, ಶಬ್ಬೀರ ದೇಗಿನಾಳ, ಸಚಿನ್ ತೊಂಡಿಹಾಳ, ಶಬ್ಬೀರ್ ಮಿರ್ಜಾ, ಮಹೇಂದ್ರಕರ ದತ್ತು, ಸಂಗಮೇಶ ಸಿದ್ದಾಪುರ, ಮಹೇಶ ಸಿದ್ದಾಪುರ, ತನ್ವೀರ ನಾಲಬಂದ, ಸಮೀರ ಕೇಶಾಪುರ, ರೂಪಾ ಗಂಗಾಧರ ಪತ್ತಾರ, ಪಾಂಡುರಂಗ ತೋರತ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-26-1333157195

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.