ಮುದ್ದೇಬಿಹಾಳ: ಪಟ್ಟಣದಲ್ಲಿ ಶನಿವಾರ ರಾತ್ರಿ ಸುರಿದ ಬಾರಿ ಮಳೆಗೆ ಸಂಗಮೇಶ್ವರ ನಗರದಲ್ಲಿನ ಮನೆಗಳಿಗೆ ಚರಂಡಿ ನೀರು ನುಗ್ಗಿ ರಾತ್ರಿಯಿಡೀ ನಿವಾಸಿಗಳು ಪರದಾಡಿದರು.

24×7 ಕುಡಿಯುವ ನೀರು ಸರಬರಾಜು ಪೈಪ್ಗಳನ್ನು ಚರಂಡಿಯಲ್ಲಿ ಅಡ್ಡಲಾಗಿ ಹಾಕಿರುವುದರಿಂದ ಚರಂಡಿ ಒಳಗಡೆ ತ್ಯಾಜ್ಯ ವಸ್ತುಗಳು ಶೇಖರಣೆಗೊಂಡು, ಚರಂಡಿ ನೀರು ಹುಸೇನಸಾಬ ಬೀಳಗಿ ಅವರ ಮನೆ, ವಾಸವಿ ಚಿಕ್ಕಮಕ್ಕಳ ಆಸ್ಪತ್ರೆಗೆ ನುಗ್ಗಿತ್ತು.

ಪುರಸಭೆ ಮಾಜಿ ಸದಸ್ಯ ವೀರೇಶ ಹಡಲಗೇರಿ ಮಾಹಿತಿ ಮೇರೆಗೆ ಕಂದಾಯ ನಿರೀಕ್ಷಕ ಡಿ.ಎಸ್. ತಳವಾರ, ಪುರಸಭೆ ಸಿಬ್ಬಂದಿ ಮಹಾಂತೇಶ ಕಟ್ಟಿಮನಿ, ಮೂಲಿಮನಿ ಜಾವೇದ್ ಮತ್ತು ಪೌರಕಾರ್ಮಿಕರು ಜೆಸಿಬಿ ವಾಹನ ಸಮೇತವಾಗಿ ಸ್ಥಳಕ್ಕೆ ದೌಡಾಯಿಸಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-26-650689382

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.