ಮುದ್ದೇಬಿಹಾಳ: ಸಮೀಪದ ಬಿದರಕುಂದಿ ಗುಡ್ಡದಲ್ಲಿ ನಿರ್ಮಾಣವಾಗುತ್ತಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಶನಿವಾರ ಭೇಟಿ ನೀಡಿದ್ದ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು, ಅರಣ್ಯ ಇಲಾಖೆ ಮತ್ತು ಕೆ.ಆರ್.ಐ.ಡಿ.ಎಲ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ವಿವಿಧ ಯೋಜನೆಗಳ ಕಾಮಗಾರಿಗಳನ್ನು ವೀಕ್ಷಿಸಿದರು.

33 ಎಕರೆ ವಿಸ್ತೀರ್ಣದ ಉದ್ಯಾನದಲ್ಲಿ ಸಮರೋಪಾದಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ ಅಲ್ಲಿ 3500 ದೊಡ್ಡ ಗಿಡಗಳನ್ನು ಜೊತೆಗೆ 25 ಸಾವಿರಕ್ಕೂ ಹೆಚ್ಚು ಅಲಂಕಾರಿಕ ಮತ್ತು ಔಷಧೀಯ ಗಿಡಗಳನ್ನು ನೆಡಲಾಗಿದೆ. ಅವುಗಳ ರಕ್ಷಣೆಗೆ ನುರಿತ ತಂಡವೇ ಕಾರ್ಯ ನಿರ್ವಹಿಸುತ್ತಿದೆ ಎಂದು ವಲಯ ಅರಣ್ಯಾಧಿಕಾರಿಗಳಾದ ಬಸನಗೌಡ ಬಿರಾದಾರ ಮತ್ತು ಗಿರೀಶ್ ಆಲಕುಡೆ ವಿವರಿಸಿದರು.

ಉದ್ಯಾನದಲ್ಲಿ ಆಕರ್ಷಕ ಪ್ಯಾರಾಗೋಲಗಳು, ವೀಕ್ಷಣಾ ಗೋಪುರ, ಸಿಬ್ಬಂದಿ ವಸತಿ ಗೃಹಗಳು, ಶುದ್ಧ ಕುಡಿಯುವ ನೀರಿನ ಘಟಕ, ಸಣ್ಣ ಸಣ್ಣ ನೀರಿನ ಹೊಂಡಗಳು, ಸ್ಥಳೀಯ ಕಲ್ಲುಗಳನ್ನೇ ಬಳಸಿ ಮಾಡಲಾದ ನೈಸರ್ಗಿಕ ನೀರಿನ ಝರಿಗಳು, ಬೃಹತ್ ಪ್ರಮಾಣದ ನೀರು ಸಂಗ್ರಹಾಗಾರ, ಚಿಕ್ಕ ಮಕ್ಕಳಿಗೆ ಮನರಂಜನಾ ಪಾರ್ಕ್, ಹೊರಾಂಗಣ ವ್ಯಾಯಾಮದ ಮೈದಾನ, ಉದ್ಯಾನದ ಸುತ್ತಲೂ ವಿಶಾಲವಾದ ವಾಯು ವಿಹಾರ ಪಥ, ಎಲ್ಲೆಡೆ ವಿಶ್ರಾಂತಿ ಕಟ್ಟೆಗಳು, ಕ್ಯಾಂಟೀನ್ ನಿರ್ಮಾಣ ಭರದಿಂದ ಸಾಗಿವೆ. ಇಡೀ ಪ್ರದೇಶದಲ್ಲಿ ಬೀಳುವ ಮಳೆ ನೀರಿನ ಒಂದು ಹನಿಯೂ ವ್ಯರ್ಥವಾಗದಂತೆ ಮಳೆ ನೀರಿನ ಸಂಗ್ರಹ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಉದ್ಯಾನದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ನೀರೆರೆದರು. ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಅಮರೇಶ ಗೂಳಿ, ಗೌರವಾಧ್ಯಕ್ಷ ಸೋಮಶೇಖರ ಚೀರಲದಿನ್ನಿ, ಕಾರ್ಯದರ್ಶಿ ಬಸವರಾಜ ಬಿಜ್ಜೂರ, ಕಾಯಕಯೋಗಿ ಪ್ರಶಸ್ತಿ ಪುರಸ್ಕೃತ ಹಾಗೂ ಸಂಚಾಲಕ ಮಹಾಬಲೇಶ್ವರ ಗಡೇದ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಳಗದ ಮಾಜಿ ಅಧ್ಯಕ್ಷರಾದ ಬಿ.ಎಸ್.ಮೇಟಿ, ಅಶೋಕ ರೇವಡಿ, ನಾಗಭೂಷಣ ನಾವದಗಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಬಿ.ಎಚ್.ಬಳಬಟ್ಟಿ, ಸದಸ್ಯರಾದ ಬಿ.ಎಂ.ಪಲ್ಲೇದ, ಜಿ.ಎಂ.ಹುಲಗಣ್ಣಿ, ಮಲ್ಲಿಕಾರ್ಜುನ ಬಾಗೇವಾಡಿ, ವೆಂಕನಗೌಡ ಪಾಟೀಲ, ಎಚ್.ವೈ.ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.