ಮುದ್ದೇಬಿಹಾಳ: ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಮತ್ತು ಅಹಿಂದ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕುರುಬ ಸಮುದಾಯದ ಮುಖಂಡರ ಜನಜಾಗೃತಿ ಸಮಾವೇಶ ಆ.24 ರಂದು ಮುದ್ದೇಬಿಹಾಳದ ವಿಜಯ ಮಹಾಂತೇಶ ಮಂಗಲ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ಪಿ.ಬಿ.ಮಾತಿನ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಕುರುಬ ಸಮುದಾಯದ ಜನಜಾಗೃತಿ ಸಮಾವೇಶದ ಕರಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು.

ರಾಜ್ಯಮಟ್ಟದ ಕುರುಬ ಸಮಾಜದ ನಾಯಕರು ಭಾಗವಹಿಸಲಿದ್ದು, ಕುರುಬ ಸಮುದಾಯದ ಎಸ್.ಟಿ ಮೀಸಲಾತಿ ಜಿಲ್ಲಾ ಕೇಂದ್ರಗಳಲ್ಲಿ ಕನಕಶ್ರೀ ಭವನ, ಐಎಎಸ್,ಕೆಎಎಸ್ ಪರೀಕ್ಷೆಯ ತರಬೇತಿ ಆರಂಭಿಸುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಸಮಾಜದ ಮುಖಂಡರಾದ ಎಂ. ಬಿ. ಗುಬಚಿ, ವಕೀಲರಾದ ಎಸ್.ಎಸ್.ಬಿರಾದಾರ, ಎಚ್.ಕೆ.ವಾಲೀಕಾರ, ಆರ್. ಎನ್. ದೊಡ್ಡಮನಿ, ಎಸ್. ಎಸ್.ಹುಡೇದ, ಎಲ್.ಎಸ್.ಮೇಟಿ, ವೈ.ವೈ.ಪೂಜಾರಿ, ಎಸ್.ಜಿ.ಪಾಟೀಲ್, ಜಗದೀಶ ಬಿರಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.