ನಾಲತವಾಡ: ಲಕ್ಷಾಂತರ ವೆಚ್ಚದಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಲಾದ ಬಸವೇಶ್ವರ ವೃತ್ತ ಅವ್ಯವಸ್ಥೆಯ ತಾಣವಾಗಿದ್ದು, ಕ್ರಮ ಕೈಗೊಳ್ಳಲಲು ಪಟ್ಟಣ ಪಂಚಾಯಿತಿಯವರು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯ ಬಿಜೆಪಿ ಯುವ ಮುಖಂಡರು ಹಾಗೂ ಹಿರಿಯರು ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದರು.

ಬಸವೇಶ್ವರ ವೃತ್ತದಲ್ಲಿ ಪುತ್ಥಳಿ ಪ್ರತಿಷ್ಠಾಪನೆ ಮಾಡಿ 3-4 ವರ್ಷಗಳೇ ಕಳೆದರೂ ಸುತ್ತಲೂ ಗ್ರಿಲ್ ಹಾಗೂ ಏರಲು ಏಣಿಯ ವ್ಯವಸ್ಥೆ ಮಾಡಿಲ್ಲ, ವೃತ್ತದಲ್ಲಿ ಹಂದಿಗಳ ವಾಸ, ಅಂಗಡಿಕಾರರ ಕಿರಿಕಿರಿ, ಕಸ ಕಡ್ಡಿ ಹಾಕಲಾಗುತ್ತಿದೆ. ಪಟ್ಟಣದ ವಿವಿಧ ವೃತ್ತಗಳನ್ನು ಅಭಿವೃದ್ಧಿಗೊಳಿಸಿ ಬಸವಣ್ಣನವರ ವೃತ್ತವನ್ನಷ್ಟೆ ಏಕೆ ಅಭಿವೃದ್ಧಿ ಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಕ್ರಮ ಕೈಗೊಳ್ಳದಿದ್ದಲ್ಲಿ ಏ.20ರಂದು ಬಸವ ಜಯಂತಿಯಂದು ಹೋರಾಟ ಮಾಡಲಾಗುವುದು. ಪಟ್ಟಣದಲ್ಲಿ ಅಭಿವೃದ್ಧಿ ಶೂನ್ಯಗೊಂಡಿದೆ, ಹೆಸರಿಗೆ ಮಾತ್ರ ಮಹಿಳಾ ಶೌಚಾಲಯ ನಿರ್ಮಿಸಿ ಅನುದಾನ ವ್ಯರ್ಥ ಮಾಡಿದ್ದೀರಿ, ಅವುಗಳ ಬಳಕೆ ಇಲ್ಲ, ವೀರೇಶನಗರದಲ್ಲಿ ರೈತರ ಜಮೀನು ಕಬಳಿಸಿ ಅವೈಜ್ಞಾನಿಕ ಘನತ್ಯಾಜ ಸಂಗ್ರಹ ಘಟಕ ನಿರ್ಮಾಣ ಮಾಡಿ ಸುಮಾರು ₹30 ಲಕ್ಷ ವೆಚ್ಚದ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದರು.

ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಪಟ್ಟಣ ಪಂಚಾಯಿತಿ ಸಿಒ ಈರಣ್ಣ ಕೊಣ್ಣೂರ ಹಾಗೂ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ಗಂಗನಗೌಡ್ರ ಮಾತನಾಡಿ, ‘ಮುಂದಿನ ಸಾಮಾನ್ಯ ಸಭೆಯಲ್ಲಿ ನಿಮ್ಮೆಲ್ಲ ಬೇಡಿಕೆ ಚರ್ಚಿಸಿ ಬಸವೇಶ್ವರ ವೃತ್ತದ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟು ಅನುಮೋದನೆಗೆ ಕಳಿಸಲಾಗುವುದು. ಇತರೇ ಅಭಿವೃದ್ಧಿ ವಿಷಯಗಳಿಗೆ ಸ್ಪಂದಿಸಲಾಗುವುದು’ ಎಂದು ತಿಳಿಸಿದರು.

ಸಂಗು ಮೇಟಿ, ಎಂ.ಬಿ.ಅಂಗಡಿ, ಪಿ.ಜಿ.ಬಿರಾದಾರ, ಸಂಗನಗೌಡ ಕುಳಗೇರಿ, ಬಾಪುಗೌಡ ಪಾಟೀಲ, ಎ.ಎಸ್.ಪಟ್ಟಣಶೆಟ್ಟಿ, ಚಂದ್ರಶೇಖರ ದೇಶಮುಖ, ಜಿ.ಎಚ್.ಗಂಗನಗೌಡ್ರ, ಎಚ್.ಎಂ.ವಡಗೇರಿ, ಶೇಖಣ್ಣ ಗಂಗನಗೌಡ್ರ, ಸಂಗಣ್ಣ ಕಾಳಗುಂಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-26-1163676561

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.