ನಾಲತವಾಡ: ಮಾಲೀಕನ ಪುತ್ರನೇ ಇಲ್ಲಿನ ಪೆಟ್ರೋಲ್ ಬಂಕ್ಅನ್ನು ಸಂಪೂರ್ಣ ನಾಶಗೊಳಿಸಿದ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ.

ಸಂಗಣ್ಣ ಸಂಗಮ ಅವರಿಗೆ ಸೇರಿದ ಪಟ್ಟಣದ ನಾರಾಯಣಪುರ ರಸ್ತೆಯಲ್ಲಿನ ಪವಾಡ ಬಸವೇಶ್ವರ ಇಂಡಿಯಲ್ ಆಯಿಲ್ ಬಂಕ್ಗೆ ಹಾನಿಯಾಗಿದೆ. ಮುತ್ತಣ್ಣ ಎಂಬವರು ಈ ಘಟನೆಗೆ ಕಾರಣರಾದವರು.

‘ಮುತ್ತಣ್ಣ ರಾತ್ರಿ ಏಕಾಏಕಿ ನುಗ್ಗಿ ಆವೇಶದಲ್ಲಿ ತೈಲ ಸರಬರಾಜು ಮಾಡುವ ಪೆಟ್ರೋಲ್ ಎಂಜಿನ್, ಗನ್, ಕಚೇರಿಯ ದಾಖಲೆಗಳು, ಲ್ಯಾಪ್ಟ್ಯಾಪ್ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾರೆ. ಬಂಕ್ ಬಳಿ ನಿಲ್ಲಿಸಿದ್ದ ವಾಹನಗಳಿಗೂ ಹಾನಿ ಮಾಡಿದ್ದಾರೆ’ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುದ್ದೇಬಿಹಾಳ ಸಿಪಿಐ ಮಹ್ಮದ ಫಶೀವುದ್ದಿನ್ ಹಾಗೂ ಪಿಎಸ್ಐ ಸಂಜಯ ತಿಪ್ಪಾರಡ್ಡಿ ಬಂಕ್ಗೆ ಭೇಟಿನೀಡಿ ವಿವರ ಪಡೆದುಕೊಂಡರು.

ತೈಲಕ್ಕಾಗಿ ಪರದಾಟ: ಪಟ್ಟಣದಲ್ಲಿ ಒಂದೇ ಬಂಕ್ ಇರುವ ಕಾರಣ ವಾಹನಗಳ ಮಾಲೀಕರು ತೈಲ ತುಂಬಿಸಿಕೊಳ್ಳಲು ದೂರದ ಹಿರೇಮುರಾಳ ಹಾಗೂ ನಾರಾಯಣಪುರಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-26-371562328

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.