ನಾಲತವಾಡ: ‘ಪಟ್ಟಣದಲ್ಲಿ ಬಸವ ಜಯಂತಿಯನ್ನು ಏ. 20ರಂದು ಅದ್ಧೂರಿಯಾಗಿ ಆಚರಿಸಲಾಗುವುದು. ಎಲ್ಲ ಸಮಾಜದ ಮುಖಂಡರು, ಯುವಕರು ಮತ್ತು ಮಹಿಳೆಯರು ಪಾಲ್ಗೊಳ್ಳಬೇಕು’ ಎಂದು ಸ್ಥಳೀಯ ಬಸವ ಕೇಂದ್ರದ ಗೌರವಾಧ್ಯಕ್ಷ ಎ.ಎಸ್.ಪಟ್ಟಣಶೆಟ್ಟಿ ಹೇಳಿದರು.

ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಬಸವ ಕೇಂದ್ರದ ಆಶ್ರಯದಲ್ಲಿ ಬಸವ ಜಯಂತಿ ಆಚರಣೆ ಕುರಿತು ಇಲ್ಲಿ ಭಾನುವಾರ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಏ.20ರಂದು ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಪ್ರಮುಖ ಮಾರುಕಟ್ಟೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಗೌರವ ಸಮರ್ಪಿಸಿ, ಸಂಜೆ 5.30ಕ್ಕೆ ದೇಶಮುಖ ಓಣಿಯ ಹೇಮರೆಡ್ಡಿ ಮಲ್ಲಮ್ಮ ವೃತ್ತದ ವಿಶಾಲ ಬಯಲು ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಷಟಸ್ಥಲ ಧ್ವಜಾರೋಹಣ, ಭಾರತದ ಸಂವಿಧಾನ ಪೀಠಿಕೆ ಬೋಧನೆ, ಉಪನ್ಯಾಸ ಸತೀಶ ಕೆ.ಇಟಗಿ(ಕೊಳೂರ) ಅವರಿಂದ ಬಸವ ಜಯಂತಿ ಆಚರಣೆ ನಡೆದು ಬಂದ ಹಾದಿ ಬಗ್ಗೆ ಅನುಭಾವ ನಡೆಯಲಿದೆ ಎಂದರು.

ಶಂಭುಲಿಂಗಪ್ಪ ದುದ್ದಗಿ, ನಿಂಗಣ್ಣ ಅಗ್ನಿ, ಪಿ.ಜಿ.ಬಿರಾದಾರ, ಬಸವರಾಜ ಪೂಜಾರಿ, ಮಲ್ಲಿಕಾರ್ಜುನ ಹುಣಸಗಿ, ಜಾಲಹಳ್ಳಿ, ಗಂಗಣ್ಣ ಜಾವಳಗೇರಿ, ಮಲ್ಲಣ್ಣ ಗಡೇದ, ಶಿವಪುತ್ರಪ್ಪ ತಾಳಿಕೋಟಿ, ದಾಸಿಮಯ್ಯ ಬಂಟನೂರ, ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-26-1032486922

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.