ನಾಲತವಾಡ: ಪಟ್ಟಣದಲ್ಲಿರುವ ಸಿ.ಎ. ನಿವೇಶನಗಳು, ಗಾರ್ಡನ್ ಜಾಗಗಳು ಹಾಗೂ ವಿವಿಧ ಬಡಾವಣೆಗಳಲ್ಲಿರುವ ಸರ್ಕಾರಿ ಜಾಗಗಳನ್ನು ಪಟ್ಟಣ ಪಂಚಾಯಿತಿ ಹೆಸರಿಗೆ ದಾಖಲಿಸುವ ಕಾರ್ಯದಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ ಪಟ್ಟಣ ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆಗಳಿಗೆ ಗೈರಾಗಲು ನಿರ್ಧಾರ ಕೈಗೊಂಡಿದ್ದಾರೆ.

ಪಟ್ಟಣ ಪಂಚಾಯಿತಿ ಸದಸ್ಯರು ಈ ಕುರಿತು ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದ ಪತ್ರದಲ್ಲಿ, ಈಗಾಗಲೇ ನಡೆದ ಅನೇಕ ಸಭೆಗಳಲ್ಲಿ ಈ ವಿಷಯವನ್ನು ಹಲವು ಬಾರಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದರಿಂದ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಹತ್ವದ ವಿಷಯವು ನಿರ್ಲಕ್ಷ್ಯಗೊಳ್ಳುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

ಈ ಜಾಗಗಳನ್ನು ಪಟ್ಟಣ ಪಂಚಾಯಿತಿ ಹೆಸರಿಗೆ ದಾಖಲಿಸುವ ಹಾಗೂ ಸಂಬಂಧಿತ ಕ್ರಮಗಳನ್ನು ಪೂರ್ಣಗೊಳಿಸುವ ತನಕ ನಡೆಯುವ ಸಾಮಾನ್ಯ ಸಭೆಗಳಿಗೆ ಹಾಜರಾಗುವುದಿಲ್ಲವೆಂದು ಪತ್ರದಲ್ಲಿ ತಿಳಿಸಿದ್ದಾರೆ. ಒಂದು ವೇಳೆ ಎರಡು ತಿಂಗಳ ಅವಧಿಯಲ್ಲಿ ಇದಾಗದಿದ್ದರೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ‘ಈಗಾಗಲೇ ನಿಯಮದಂತೆ ಹೊಸ ಬಡಾವಣೆಗಳ ಜಾಗವನ್ನು ಪ.ಪಂ ಹೆಸರಿಗೆ ಮಾಡಿದ್ದೇವೆ. ಹಿಂದೆ ಗ್ರಾಮ ಪಂಚಾಯಯಿತಿ ಅವಧಿಯಲ್ಲಿ ಬಡಾವಣೆಗಳ ದಾಖಲಾತಿ ನೀಡಲು ಸಾಕಷ್ಟು ಬಾರಿ ತಾ.ಪಂಗೆ ಪತ್ರ ಬರೆದರೂ ಅವರು ದಾಖಲೆ ನೀಡುತ್ತಿಲ್ಲ. ಮತ್ತೊಮ್ಮೆ ಪತ್ರ ಬರೆಯುತ್ತೇನೆ’ ಎಂದರು.

ಸದಸ್ಯರಾದ ಪೃಥ್ವಿರಾಜ್ ನಾಡಗೌಡ, ಸಂಗಣ್ಣ ಬಾರಡ್ಡಿ, ಬಾಬು ಕ್ಷತ್ರಿ, ಪುತ್ರಪ್ಪ ಗುರಿಕಾರ, ರಮೇಶ ಆಲಕೊಪ್ಪರ, ಮಹ್ಮದ ನಾಡದಾಳ, ಸೇರಿದಂತೆ ಇನ್ನಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-26-494202676

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.