ನಾಲತವಾಡ: ರಂಜಾನ್ ಎಂದರೆ ಕೇವಲ ಉಪವಾಸದ ತಿಂಗಳು ಮಾತ್ರವಲ್ಲ; ಇದು ದಾನ, ಧರ್ಮ, ಸಹನೆ ಮತ್ತು ಪರಸ್ಪರ ಸಹಾಯದ ಮಹತ್ವವನ್ನು ಸಾರುವ ಪವಿತ್ರ ಕಾಲವಾಗಿದೆ. ಈ ಸಮಯದಲ್ಲಿ ಹಸಿದವರಿಗೆ ಅನ್ನ ನೀಡುವುದು ಮತ್ತು ಬಡವರಿಗೆ ನೆರವಾಗುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪೃಥ್ವಿರಾಜ್ ನಾಡಗೌಡ ಹೇಳಿದರು.

ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಗುರುವಾರ ಸಂಜೆ ರಂಜಾನ್ ಹಬ್ಬದ ಅಂಗವಾಗಿ ಬಡವರಿಗೆ ದಿನಸಿ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಜುಮನ್ ಅಧ್ಯಕ್ಷ ಲಾಳೆಮಶಾಕ ಅವಟಿ ಮಾತನಾಡಿ, ನಮ್ಮ ಭಾಗದ ದಾನಶೀಲರಾದ ಬಾಪುಸಾಹೇಬ ದೇಶಮುಖ ಹಾಗೂ ಪೃಥ್ವಿರಾಜ್ ನಾಡಗೌಡ ಅವರು ಸುಮಾರು 85 ಬಡ ಕುಟುಂಬಗಳಿಗೆ ರಂಜಾನ್ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಈ ಇಬ್ಬರು ಸದಾ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಅಂಜುಮನ್ ಸದಸ್ಯ ಮೌಲಾಸಾಬ ರಕ್ಕಸಗಿ ಮಾತನಾಡಿ, ರಂಜಾನ್ ತಿಂಗಳು ತ್ಯಾಗ, ಸಹನೆ ಮತ್ತು ಸಹಾನುಭೂತಿಯ ಸಂದೇಶ ನೀಡುತ್ತದೆ.

ಈ ಸಂದರ್ಭದಲ್ಲಿ ಬಡವರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ಸನ್ಮಾನ: ಕಾರ್ಯಕ್ರಮದ ಅಂಗವಾಗಿ ಅಂಜುಮನ್ ಕಮೀಟಿ ವತಿಯಿಂದ ಬಾಪುಸಾಹೇಬ ದೇಶಮುಖ ಹಾಗೂ ಪೃಥ್ವಿರಾಜ್ ನಾಡಗೌಡ ಅವರಿಗೆ ಸನ್ಮಾನಿಸಲಾಯಿತು.

ಮೌಲಾನಾ ಇಸ್ಮಾಯಿಲ್ ಮುಲ್ಲಾ ಅವರು ಕುರ್ಆನ್ ಪಠಣದ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಯೂನುಸ್ ನಿರೂಪಿಸಿದರು. ಹಿರಿಯರಾದ ರಾಜೇಸಾಬ ಕುಳಗೇರಿ, ರಸೂಲಸಾಬ ಖಾಜಿ, ಮಹ್ಮದ ಅವಟಿ, ಅಲ್ಲಾಭಕ್ಷ ಕುಳಗೇರಿ, ಇಬ್ರಾಹಿಂ ಮೂಲಿಮನಿ, ಜಾಫರ ಮಕಾಂದಾರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-26-215870058

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.