ನಾಲತವಾಡ: ಪಟ್ಟಣ ಪಂಚಾಯಿತಿಯ ಮೊದಲನೇ ಅವಧಿಯ ಅಧ್ಯಕ್ಷೆಯಾಗಿದ್ದ ವಿಜಯಲಕ್ಷ್ಮೀ ಇಳಕಲ್ ಅವರು ಕಳೆದ ತಿಂಗಳು ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಮಂಗಳವಾರ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡ್ನ ಸದಸ್ಯೆ ಲಲಿತಾ ಗೊರಬಾಳ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಅಧ್ಯಕ್ಷೆಯಾಗಿ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಎ.ಡಿ. ಅಮರಾವಾದಗಿ, ಉಪತಹಶೀಲ್ದಾರ್ ನಿಂಗಪ್ಪ ದೊರೆ ಹಾಗೂ ಕಂದಾಯ ನಿರೀಕ್ಷಕ ವೆಂಕಟೇಶ್ವರ ಅಂಬಿಗೇರ ನಡೆಸಿಕೊಟ್ಟರು.

‘ಮೊದಲ ಅವಧಿಯ ಅಧ್ಯಕ್ಷ ಸ್ಥಾನ ಹಂಚಿಕೆ ಕುರಿತು ಪೂರ್ವ ನಿಗದಿಯಾದ ಹೊಂದಾಣಿಕೆಯಂತೆ ಹಾಗೂ ಶಾಸಕರ ಆದೇಶದ ಮೇರೆಗೆ ಅಧ್ಯಕ್ಷರಾಗಿ ಲಲಿತಾ ಗೊರಬಾಳ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ’ ಎಂದು ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಪೃಥ್ವಿರಾಜ್ ನಾಡಗೌಡ ತಿಳಿಸಿದ್ದಾರೆ.

ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಲಲಿತಾ ಗೊರಬಾಳ ಅವರನ್ನು ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ, ಮಾಜಿ ಅಧ್ಯಕ್ಷ, ಸದಸ್ಯ ಪೃಥ್ವಿರಾಜ್ ನಾಡಗೌಡ, ವಿಜಯಲಕ್ಷ್ಮೀ ಇಲಕಲ್,ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಸದಸ್ಯರಾದ ಜಗದೀಶ ಡೇರೆದ, ಶರಣಬಸಪ್ಪ ಗಂಗನಗೌಡರ, ರಾಜಬೀ ನಾಡದಾಳ, ರಮೇಶ ಶಂಕ್ರಪ್ಪ ಆಲಕೊಪ್ಪರ, ಶಿವಪುತ್ರಪ್ಪ ಸಂಗಪ್ಪ ಗುರಿಕಾರ, ಯಮನವ್ವ ಬಂಡಿವಡ್ಡರ, ಬಸೀರಾಬೇಗಂ ಮೂಲಿಮನಿ, ಸಂಗಪ್ಪ ಬಾರಡ್ಡಿ, ತಿರುಪತಿ ಕ್ಷತ್ರಿ, ಅಂಬ್ರಪ್ಪ ಶೀರಿ, ಗ್ರಾಮ ಆಡಳಿತ ಅಧಿಕಾರಿ ಸಚಿನ್ ಗೌಡರ, ಚುನಾವಣೆ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-26-1519027267

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.