ಶನಿವಾರ, ಮೇ 28, 2022
31 °C

ವಿದ್ಯಾರ್ಥಿಗಳಿಂದ ರಾಷ್ಟ್ರರಕ್ಷಣೆ: ಅಮಿತ್‌ ಕುಮಾರ್‌ ಬಿರಾದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಭಾರತವು ಬಹುತೇಕ ಯುವಕರನ್ನು ಹೊಂದಿದ ರಾಷ್ಟ್ರವಾಗಿದ್ದು, ರಾಷ್ಟ್ರ ಪುನರ್ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ ಎಂದು ಎಬಿವಿಪಿ ನಗರ ಅಧ್ಯಕ್ಷ  ಅಮಿತ್‌ ಕುಮಾರ್‌ ಬಿರಾದಾರ ಹೇಳಿದರು.

ನಗರದ ಸಹ್ಯಾದ್ರಿ ಪದವಿ ಮಹಾವಿದ್ಯಾಲಯದಲ್ಲಿ ಸಹ್ಯಾದ್ರಿ ಕಾಲೇಜು ಕಮಿಟಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಕಾಲೇಜುಗಳಲ್ಲಿ ಅನೇಕ ವಿದ್ಯಾರ್ಥಿಗಳು ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿ. ಬದಲಾಗುತ್ತಿರುವ ದೇಶದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಕಟ್ಟುವ ಕಾರ್ಯದಲ್ಲಿ ಭಾಗವಹಿಸಬೇಕು ಎಂದರು.

ಎಬಿವಿಪಿ ಜಿಲ್ಲಾಸಂಚಾಲಕ ಬಸವರಾಜ ಪೂಜಾರಿ, ಜಗತ್ತಿನ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ವಿದ್ಯಾರ್ಥಿಗಳಲ್ಲಿ ರಚನಾತ್ಮಕ ಮತ್ತು ಆಂದೋಲನಾತ್ಮಕ ಗುಣಗಳನ್ನು ಬೆಳೆಸುತ್ತಿದೆ ಎಂದರು.

ಪ್ರಾಚಾರ್ಯ ಬಿ.ಎಸ್ ಬಾಪಗೊಂಡ ಮಾತನಾಡಿ, ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ವಿವೇಕಾನಂದರ ಆದರ್ಶಗಳ ಮೂಲಕ ರಾಷ್ಟ್ರ ಚಿಂತನೆಯೆಡೆಗೆ ಬೆಸೆದು, ರಾಷ್ಟ್ರ ನಾಯಕರಾಗಲು ಎಬಿವಿಪಿ ಪ್ರೇರೆಪಿಸುತ್ತಿದೆ ಎಂದರು.

ಕಾಲೇಜು ಕಮಿಟಿಯ ಅಧ್ಯಕ್ಷರಾಗಿ ಸಂಜು ಗೋಡೆಕರ್, ಕಾರ್ಯದರ್ಶಿಯಾಗಿ ಸಚಿನ ಗದ್ಯಾಳ ಅವರನ್ನು ಆಯ್ಕೆ ಮಾಡಲಾಯಿತು. ಸಂಘಟನಾ ಕಾರ್ಯದರ್ಶಿ ನಾಗರಾಜ ಬಟಗೇರಾ, ಅಕ್ಷಯ ಯಾದವಾಡ, ಸಹ ಸಂಚಾಲಕ ಮಹಾಂತೇಶ ಕಂಬಾರ, ಉಪಾಧ್ಯಕ್ಷ ಓಂಕಾರ ನಾವಿ, ಸಹ ಕಾರ್ಯದರ್ಶಿ ಸಿದ್ದು ಉಪ್ಪಾರ, ಪ್ರಮುಖರಾದ ಪಾಂಡು ಮೋರೆ, ಸಂದೀಪ ಅರಳಗುಂಡಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.