ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲಮಟ್ಟಿ: ಗುರುವಂದನಾ ಕಾರ್ಯಕ್ರಮ

Published 30 ಜುಲೈ 2023, 11:12 IST
Last Updated 30 ಜುಲೈ 2023, 11:12 IST
ಅಕ್ಷರ ಗಾತ್ರ

ಆಲಮಟ್ಟಿ: ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನುದುದ್ದಕ್ಕೂ ಅಗತ್ಯ, ಅದರಲ್ಲಿಯೂ ಬದುಕಿನ ಆರಂಭದ ಮೆಟ್ಟಿಲುಗಳನ್ನು ಕಲಿಸುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನಂತೂ ಮೆರೆಯಲು ಅಸಾಧ್ಯ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾಧ್ಯಾಪಕ, ಹೃದ್ರೋಗ ತಜ್ಞ, ಇಲ್ಲಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಡಾ ಅರುಣ ಉಳ್ಳಾಗಡ್ಡಿ ಅಭಿಪ್ರಾಯಪಟ್ಟರು.
ಸ್ಥಳೀಯ ಸಮುದಾಯ ಭವನದಲ್ಲಿ 1997 ರಲ್ಲಿ ಇಲ್ಲಿಯ ಎಂಪಿಎಸ್ ಶಾಲೆಯಲ್ಲಿ 7 ನೇ ವರ್ಗ ಪಾಸಾದ ಹಾಗೂ 2000 ನೇ ಇಸ್ವಿಯಲ್ಲಿ ಎಂಎಚ್ ಎಂ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರಿ, ಕನ್ನಡ ಮಾಧ್ಯಮ ಗ್ರಾಮೀಣ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೇ ಬದುಕು, ಸಮಾಜದಲ್ಲಿ ಛಲ, ಹಿಂಜರಿಕೆಯಿಲ್ಲದೇ ಮುನ್ನಡೆಯಲು ಸಾಧ್ಯ ಎಂದರು.
ನಿವೃತ್ತ ಶಿಕ್ಷಕ ಎಸ್.ಐ. ಹರಣಶಿಕಾರಿ ಮಾತನಾಡಿ, ಆಲಮಟ್ಟಿ ಒಂದು ಶಕ್ತಿ ಕೇಂದ್ರ, ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ ಅವರು ನಡೆದಾಡಿ, ಸ್ಥಾಪಿಸಿದ ಶಾಲೆಯಲ್ಲಿ ಕಲಿತ ಎಲ್ಲರೂ ಪುಣ್ಯವಂತರು ಎಂದರು. ನಮ್ಮ ಮಕ್ಕಳು ಕೂಡಾ ಗೌರವಿಸದ ಈ ಕಾಲ ಘಟ್ಟದಲ್ಲಿ ಹಳೆ ವಿದ್ಯಾರ್ಥಿಗಳು ನಮ್ಮನ್ನು ನಡೆಸಿಕೊಂಡ ರೀತಿ ಅದ್ಭುತ, ಅದನ್ನು ಮಾತಿನಲ್ಲಿ ವರ್ಣಿಸಲಸಾಧ್ಯ ಎಂದು ಭಾವುಕರಾಗಿ ಮಾತನಾಡಿದರು.
ನಿವೃತ್ತ ಶಿಕ್ಷಕರಾದ ವಿ.ಎ. ಭಾಂಡವಳಕರ, ಸಿ.ಎಸ್. ಕಣಕಾಲಮಠ, ವಿ.ಎಂ. ಪಟ್ಟಣಶೆಟ್ಟಿ ಮಾತನಾಡಿದರು.
ಈ ಶಾಲೆಯ ಹಳೆ ವಿದ್ಯಾರ್ಥಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಸಾಧನೆಗೈದ ಹಳೆ ವಿದ್ಯಾರ್ಥಿಗಳು, ಈಗ ಕಲಿಯುತ್ತಿರುವ ಮಕ್ಕಳಿಗೆ ಪ್ರಭಾವ ಬೀರಬೇಕು, ಹೀಗಾಗಿ ಒಟ್ಟಾರೇ 10 ವರ್ಷದ ಹಳೆ ಬ್ಯಾಚ್ ನ ಎಲ್ಲಾ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶೀಘ್ರದಲ್ಲಿಯೇ ಏರ್ಪಡಿಸಲಾಗುವುದು ಎಂದರು.
ಇವರಿಗೆ ಕಲಿಸಿದ ಹಳೆ ಶಿಕ್ಷಕರಾದ ಪಿ.ಎಲ್. ಮಿಂಚನಾಳ, ನೀಲಾಂಬಿಕಾ ಪಾಟೀಲ, ಐ.ಬಿ. ಉಳ್ಳಾಗಡ್ಡಿ, ಎಸ್.ಬಿ. ನಾಗೂರ, ಎಸ್.ಎಚ್. ಗೋಗಿ, ಬಿ.ಎಚ್. ಗುಣದಾಳ, ಸಿ.ಎಸ್. ವಿರಕ್ತಮಠ, ಎಸ್.ಎಸ್. ಹೊಸಮನಿ, ಜಿ.ಎಂ. ಕೊಟ್ಯಾಳ, ಸಿ.ಎಸ್. ಉಪ್ಪಾರ, ಬಿ.ಎಸ್. ಯರವಿನತೆಲಿಮಠ, ಆರ್.ಎಸ್. ಹುಣಶಿಕಟ್ಟಿ, ಕಮತಗಿ, ಕೋರಿ, ಗಾಯತ್ರಿ ಅಕ್ಕಲಕೋಟೆ, ಹಿರೇಗೌಡರ ಮತ್ತೀತರರು ಇದ್ದರು.
ಹಳೆ ವಿದ್ಯಾರ್ಥಿಗಳಾದ ದಸ್ತಗೀರ ಮೇಲಿನಮನಿ, ಕೃಷ್ಣಾ ಬಸರಕೋಡ, ಜ್ಯೋತಿ ದೇಸಾಯಿ, ಪವಿತ್ರಾ ಗಲಗಲಿ, ಚನ್ನಪ್ಪ ತಳವಾರ, ಕನಕ ದೊಡಮನಿ, ವಿಶ್ವನಾಥ ಅಮರಗೊಂಡ ಮಾತನಾಡಿದರು. ಎಲ್ಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳೆ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ, ಆಟಗಳು ಜರುಗಿದವು.

ಆಲಮಟ್ಟಿಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಿದ ಬಗ
ಆಲಮಟ್ಟಿಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಿದ ಬಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT