ವಿಜಯಪುರ: ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಪ್ರಮುಖ ಘಟ್ಟವಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಅತ್ಯಂತ ಶಿಸ್ತುಬದ್ಧತೆ ಹಾಗೂ ಕೋವಿಡ್ ನಿಯಮಗಳನ್ನು ಅನುಸರಿಸಿ, ಕಾಳಜಿ ಪೂರ್ವಕವಾಗಿ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ ಹೇಳಿದರು.
ನಗರದ ಅಲ್ ಅಮಿನ್ ಆಸ್ಪತ್ರೆ ಎದುರಿಗೆ ಇರುವ ಶಿಕ್ಷಕರ ತರಬೇತಿ ಸಂಸ್ಥೆ (ಡಯಟ್)ಯಲ್ಲಿ ನಿರಾಣಿ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿ ಮಾತನಾಡಿದರು.
ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯನ್ನು ವಿದ್ಯಾರ್ಥಿಗಳು ಹೆದರದೆ ಧೈರ್ಯದಿಂದ ಎದುರಿಸಿ ವಿಜಯಶಾಲಿಗಳಾಗಬೇಕು. ನಿಮ್ಮೆಲ್ಲ ಗೆಲುವಿಗೆ ನಾವೆಲ್ಲರೂ ಬೆಂಬಲವಾಗಿದ್ದೇವೆ ಎಂದು ಅವರು ಹೇಳಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆ ವಿಷಯದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ದೃಢ ನಿಲುವು ತಾಳಿದ್ದು ಸ್ವಾಗತಾರ್ಹ ಮತ್ತು ಶ್ಲಾಘನೀಯ. ಇಲಾಖೆಯು ಅಧಿಕಾರಿವೃಂದ, ಪಾಲಕರು, ಸಂಘ-ಸಂಸ್ಥೆಗಳ ತಮ್ಮ ಬೆನ್ನೆಲುಬಿಗೆ ನಿಂತು ಈ ಕೊರೊನಾ ಮಧ್ಯೆಯೂ ಈ ಪರೀಕ್ಷೆಯನ್ನು ಆಯೋಜಿಸಿರುವುದು ದೇಶವೇ ಗಮನಿಸುತ್ತಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಬರೆಯದೇ ಪಾಸಾಗಿ ಜೀವನದುದ್ದಕ್ಕೂ ‘ಕೊರೊನಾ ಪಾಸ್’ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಳ್ಳದೆ, ಕೊರೊನಾ ಎದುರಿಸಿ ಪರೀಕ್ಷೆ ಬರೆದು ವಾರಿಯರ್ಸ್‌ಗಳಾಗಿ ತಲೆಯೆತ್ತಿ ನಡೆಯೋದು ಹೆಮ್ಮೆಯ ವಿಷಯ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ಎನ್.ವಿ.ಹೊಸೂರ, ಎಸ್.ಪಿ.ಬಾಡಂಗಡಿ, ಎಸ್.ಜೆ.ಹಂಚಿನಾಳ, ರವೀಂದ್ರ ತುಂಗಳ, ಭೀಮಾಶಂಕರ ಹಧನೂರು, ಮಾಳುಗೌಡ ಪಾಟೀಲ, ಗೋಪಾಲ ಘಟಕಾಂಬಳೆ, ರವಿ ಖಾನಾಪುರ, ವಿನಾಯಕ ದಹಿಂಡೆ, ಬಸವರಾಜ ಗೋಲಾಯಿ, ವಿಜಯ ಜೋಶಿ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.