ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ದರ ಹೆಚ್ಚಳಕ್ಕೆ ವಿರೋಧ

Last Updated 26 ಜನವರಿ 2022, 14:32 IST
ಅಕ್ಷರ ಗಾತ್ರ

ವಿಜಯಪುರ: ವಿದ್ಯುತ್ ದರ ಹೆಚ್ಚಳ ವಿರೋಧಿಸಿಆಮ್ ಆದ್ಮಿ ಪಕ್ಷದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು.

ಕೋವೀಡ್ ಸಾಂಕ್ರಾಮಿಕ ರೋಗದಿಂದ ರಾಜ್ಯದ ಜನರು ಕೆಲಸ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವಾಗ ವಿದ್ಯುತ್‌ ದರ ಏರಿಕೆ ಖಂಡನೀಯ ಎಂದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಲ್ಲಿಯ ರಾಜ್ಯ ಸರ್ಕಾರವು ಜನರಿಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ಹಾಗೂ ಮುಂದಿನ ನೂರು ಯುನಿಟ್ ವಿದ್ಯುತ್‌ಗೆ ಅರ್ಧ ದರ ನಿಗದಿ ಪಡಿಸಿದ ಹಾಗೆಯೇ ಕರ್ನಾಟಕ ಸರ್ಕಾರವು ವಿದ್ಯುತ್ ಉಚಿತ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ಆಮ್ ಆದ್ಮಿ ಪಕ್ಷದ ನಗರ ಅಧ್ಯಕ್ಷ ಭೋಗೇಶ್ ಸೋಲಾಪೂರ, ನಗರ ಉಪಾಧ್ಯಕ್ಷರಾದ ಶ್ರೀ ನಿಹಾದ್ ಅಹ್ಮದ್ ಗೋಡಿಹಾಳ್, ಶ್ರೀ ಅಬ್ದುಲ್ ಹಮೀದ್ ಶೇಕ್, ಡಾ ಸಾಬೀರ್ ಮೋಮಿನ್ ಪಟೇಲ್, ಶ್ರೀ ಯುವರಾಜ್ ಚೋಳ್ಕೆ ಶ್ರೀ ಸದ್ದಾಮ ಕೋರವಾರ, ಶ್ರೀ ತನ್ವಿರ್ ದಾಡೆವಾಲಾ, ಗಪುರ ಕರಜಗಿ, ಶ್ರೀ ಎ.ಎಸ್.ಪಟೇಲ್ ಮತ್ತು ಶ್ರೀ ಜ್ಯೋತಿಬಾ ಹೊನ್ನಕಳಸೆ ಇವರು ಜಿಲ್ಲಾಧಿಕಾರಿಗಳು ವಿಜಯಪೂರ ಇವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷದಿಂದ ಇಡೀ ರಾಜ್ಯವ್ಯಾಪಿ ಉಗ್ರ ರೂಪದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT