ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಹೆಚ್ಚಳಕ್ಕೆ ವಿರೋಧ: ಎಪಿಎಂಸಿ ಬಂದ್‌ ಜುಲೈ 16ಕ್ಕೆ

Last Updated 15 ಜುಲೈ 2022, 12:24 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಸರ್ಕಾರವು ಆಹಾರ ಧಾನ್ಯ, ದ್ವಿದಳ ಧಾನ್ಯಗಳ ಮೇಲೆ ಶೇ 5ರ ಜಿಎಸ್‌ಟಿ ವಿಧಿಸುವುದನ್ನು ವಿರೋಧಿಸಿ ಜುಲೈ 16 ರಂದು ಎಪಿಎಂಸಿ ಪ್ರಾಂಗಣದ ವರ್ತಕರು ವ್ಯಾಪಾರ,ವಹಿವಾಟು ಬಂದ್‌ ಮಾಡಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ವಿಜಯಪುರ ಮರ್ಚಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷರವೀಂದ್ರ ಎಸ್.ಬಿಜ್ಜರಗಿ ತಿಳಿಸಿದ್ದಾರೆ.

ಎಪಿಎಂಸಿ ಆವರಣದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ಜರುಗಿದ ರಾಷ್ಟ್ರಮಟ್ಟದ 47ನೇ ಜಿ.ಎಸ್.ಟಿ ಕೌನ್ಸಲಿಂಗ್ ಸಭೆಯಲ್ಲಿ ಆಹಾರ ಧಾನ್ಯ, ದ್ವಿದಳ ಧಾನ್ಯಗಳ ಮೇಲೆ ಶೇ 5ರಷ್ಟುತೆರಿಗೆ ವಿಧಿಸುವ ಕುರಿತು ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಮಾಡಿದೆ. ಇದರಿಂದ ವರ್ತಕರಿಗೆ ,ರೈತರಿಗೆ ಹಾಗೂ ದಿನ ನಿತ್ಯ ಅಹಾರ ಧಾನ್ಯಗಳ ಮೇಲೆ ಅವಲಂಬಿತರಾಗಿರುವ ಜನ ಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಅನವಶ್ಯಕವಾದ ಹೊರೆಯಾಗಲಿದೆ ಎಂದು ಅವರು ದೂರಿದ್ದಾರೆ.

ಈ ಮೊದಲಿನ ಹಾಗೇ ಆಹಾರ ಧಾನ್ಯ ದ್ವಿದಳ ಧಾನ್ಯಗಳನ್ನುತೆರಿಗೆ ವಿನಾಯ್ತಿ ನೀಡಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT