ವಿಜಯಪುರ: ಬಾಲಕನೊಬ್ಬ ಸ್ಕೂಟಿ ಚಲಾಯಿಸಿದ ಕಾರಣಕ್ಕೆ ಆತನ ಪೋಷಕರಿಗೆ ₹25 ಸಾವಿರ ದಂಡ ಮತ್ತು ಒಂದು ವರ್ಷ ವಾಹನದ ನೋಂದಣಿ ರದ್ದು ಪಡಿಸಿ ವಿಜಯಪುರ ಜೆಎಂಎಫ್ಸಿ ಕೋರ್ಟ್ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಮೇ 2ರಂದು ವಿಜಯಪುರ ನಗರದ ಸೋಲಾಪುರ ರಸ್ತೆಯ ‘ಪಾಟೀಲ್ ಪ್ಲಾನೆಟ್’ ಎದುರಿನ ರಸ್ತೆಯಲ್ಲಿ ಬಾಲಕನೊಬ್ಬ ಸ್ಕೂಟಿ (ಕೆಎ 28 ವೈ 2868) ಚಾಲಯಿಸಿಕೊಂಡು ಬರುತ್ತಿರುವುದನ್ನು ತಡೆದ ಸಂಚಾರ ಠಾಣೆ ಪೊಲೀಸರು, ತಪಾಸಣೆ ನಡೆಸಿದಾಗ ಚಾಲಕ ಅಪ್ರಾಪ್ತ ಇರುವುದು ಖಚಿತಪಡಿಸಿಕೊಂಡು, ಆತನ ಪೋಷಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಈ ದೂರಿನ ಅನ್ವಯ ಕೋರ್ಟ್ ಸೋಮವಾರ ದಂಡ ವಿಧಿಸಿ, ಲೇಸನ್ಸ್ ರದ್ದುಗೊಳಿಸಿದೆ ಎಂದು ಹೇಳಿದರು.

ಪಾಲಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡಬಾರದು, ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.