ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಅದಾಲತ್ ಡಿ.12 ರಂದು 

Last Updated 28 ನವೆಂಬರ್ 2022, 13:07 IST
ಅಕ್ಷರ ಗಾತ್ರ

ವಿಜಯಪುರ: ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡಲು ಡಿ.12 ರಂದು ಜಿಲ್ಲೆಯ 14 ಗ್ರಾಮಗಳಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 11ಕ್ಕೆ ವಿಜಯಪುರದ ಉಪವಿಭಾಗಾಧಿಕಾರಿಗಳು ತಾಳಿಕೋಟೆ ತಾಲ್ಲೂಕಿನ ಭಂಟನೂರ ಗ್ರಾಮದ ಮಾರುತಿ ದೇವಸ್ಥಾನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಆಸಂಗಿಹಾಳ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ, ವಿಜಯಪುರ ತಹಶೀಲ್ದಾರ್‌ ಗ್ರೇಡ್-2 ಅವರು ಮಡಸನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ, ಬಬಲೇಶ್ವರ ತಹಶೀಲ್ದಾರ್‌ ಗ್ರೇಡ್-2 ಅವರು ಶಿರಬೂರ ಗ್ರಾಮದ ಲಕ್ಷ್ಮಿ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.

ತಿಕೋಟಾ ತಹಶೀಲ್ದಾರ್‌ ಅವರು ಇಟ್ಟಂಗಿಹಾಳ ಗ್ರಾಮದ ಹನುಮಂತ ದೇವಸ್ಥಾನದಲ್ಲಿ, ಬಸವನಬಾಗೇವಾಡಿ ತಹಶೀಲ್ದಾರ್‌ ಸಂಕನಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ, ನಿಡಗುಂದಿ ತಹಶೀಲ್ದಾರ್‌ ಗ್ರೇಡ್-2 ಅವರು ಮಾರಡಗಿ ಆರ್.ಸಿ. ದುರ್ಗಾದೇವಿ ದೇವಸ್ಥಾನದಲ್ಲಿ, ಮುದ್ದೇಬಿಹಾಳ ತಹಶೀಲ್ದಾರ್‌ ಗ್ರೇಡ್-2 ಅವರು ಅಬ್ಬಿಹಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.

ತಾಳಿಕೋಟೆ ತಹಶೀಲ್ದಾರ್‌ ಅವರು ಗುಂಡಕನಾಳ ಶ್ರೀ ಸಾಯಬಣ್ಣ ಮುತ್ಯಾನ ಗುಡಿಯಲ್ಲಿ, ಇಂಡಿ ಗ್ರೇಡ್-2 ತಹಶೀಲ್ದಾರ್‌ ಅವರು ಚಿಕ್ಕಬೇವನೂರ ಗ್ರಾಮದ ಹಣಮಪ್ಪ ದೇವಸ್ಥಾನದಲ್ಲಿ, ಕೊಲ್ಹಾರ ತಹಶೀಲ್ದಾರ್‌ ತಳೇವಾಡ ಗ್ರಾಮದ ರಾಜೀವ್ ಸೇವಾ ಕೇಂದ್ರದಲ್ಲಿ, ಚಡಚಣ ಗ್ರೇಡ್-2 ತಹಶೀಲ್ದಾರ್‌ ಅವರು ಜೀರಂಕಲಗಿ ಗ್ರಾಮದ ಮಹಾದೇವನ ದೇವಸ್ಥಾನದಲ್ಲಿ ಸಿಂದಗಿ ಗ್ರೇಡ್-2 ತಹಶೀಲ್ದಾರ್‌ ಅವರು ಖೈನೂರ ಗ್ರಾಮದ ಗೊಲ್ಲಾಳೇಶ್ವರ ದೇವಸ್ಥಾನದಲ್ಲಿ ಹಾಗೂ ದೇವರಹಿಪ್ಪರಗಿ ಗ್ರೇಡ್-2 ತಹಶೀಲ್ದಾರ್‌ ಅವರು ಮಣೂರ ಗ್ರಾಮದ ಹಣಮಂತ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.

ಜಿಲ್ಲೆಯಾದ್ಯಂತ ನಡೆಯಲಿರುವ ಈ ಪಿಂಚಣಿ ಅದಾಲತ್‍ನಲ್ಲಿ ಗ್ರಾಮ ಲೆಕ್ಕಿಗರು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿರಲಿದ್ದು, ಭಂಟನೂರ, ಹಾವಿನಾಳ, ಮಡಸನಾಳ, ಶಿರಬೂರ, ಇಟ್ಟಂಗಿಹಾಳ, ಸಂಕನಾಳ, ಮಾರಡಗಿ ಆರ್.ಸಿ., ಅಬ್ಬಿಹಾಳ, ಗುಂಡಕನಾಳ, ಚಿಕ್ಕಬೇವನೂರ, ತಳೇವಾಡ, ಜೀರಂಕಲಗಿ, ಖೈನೂರ, ಮಣೂರ ಗ್ರಾಮದ ಪಿಂಚಣಿದಾರರು ಅದಾಲತ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪಿಂಚಣಿಗೆ ಸಂಬಂಧಿಸಿದ ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT