ತಾಳಿಕೋಟೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಪೆಟ್ರೋಲ್ ಬಂಕ್ಗಳಲ್ಲಿ ಕಳೆದ 15 ದಿನಗಳಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು ಪೆಟ್ರೋಲ್, ಡಿಸೆಲ್ಗಾಗಿ ಗ್ರಾಹಕರು ಪರದಾಡುವಂತಾಗಿದೆ.

ಪಟ್ಟಣ ವ್ಯಾಪ್ತಿಯಲ್ಲಿ ಏಳು ತೈಲ ವಿತರಣೆಯ ಬಂಕ್ಗಳಿದ್ದರೂ ಡಿಸೆಲ್, ಪೆಟ್ರೋಲ್ ಲಭ್ಯವಿದ್ದುದು ರಾಯ್ಕರ್ ಮತ್ತು ಮಾಳಿ ಅವರ ಪಂಪ್ಗಳಲ್ಲಿ. ಬುಧವಾರ ಇವೆರಡೂ ಬಂಕ್ಗಳಲ್ಲಿ ಸ್ಟಾಕ್ ಖಾಲಿಯಾಗಿತ್ತು. ಬಸನಗೌಡ ಬಾಗೇವಾಡಿ ಅವರ ಬಂಕ್ನಲ್ಲಿ ತೈಲ ಪೂರೈಕೆ ಆರಂಭವಾದ ಕಾರಣ ನೂರಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿದ್ದವು. ಗ್ರಾಹಕರ ನೂಕುನುಗ್ಗಲು ಹೆಚ್ಚಿದೆ.

ಡೀಸೆಲ್ ಲಭ್ಯ ಇರುವಲ್ಲಿ ದಿನಕ್ಕೆ ಇಷ್ಟೇ ಮಾರಾಟ ಮಾಡಬೇಕೆಂದು ಕಂಪನಿಯವರು ತಿಳಿಸಿದ್ದು ನಮ್ಮಲ್ಲಿ ಬರುವ ಪ್ರತಿ ಗ್ರಾಹಕರಿಗೆ ಈಗ ₹ 1,500 ರಿಂದ ₹ 2,000 ಮೊತ್ತದಷ್ಟು ಮಾತ್ರ ಡೀಸೆಲ್ ವಿತರಣೆ ಮಾಡಲಾಗುತ್ತಿದೆ ಎಂದು ಬಂಕ್ ಮಾಲೀಕರು ತಿಳಿಸಿದರು.

‘ವಾಹನಗಳಿಗೆ ಮಾತ್ರ ಹಾಕಿ, ಕ್ಯಾನ್ಗಳಿದ್ದವರಿಗೆ ಒಂದಕ್ಕೆ ಮಾತ್ರ ಹಾಕಿ, ಒಬ್ಬೊಬ್ಬರು ನಾಲ್ಕೈದು ಕ್ಯಾನ್ ಒಯ್ದರೆ ಹಿಂದಿನವರಿಗೆ ಸಿಗುವುದಿಲ್ಲ ಎಂದು ಗ್ರಾಹಕರು ತಗಾದೆ ತೆಗೆಯುತ್ತಿದ್ದಾರೆ. ಜಗಳ, ಬೈದಾಟ, ನೂಕುನುಗ್ಗಲು ಸಾಮಾನ್ಯವಾಗಿದೆ. ಗದ್ದಲ ಹೆಚ್ಚಿದಂತೆ ಡೀಸೆಲ್ ಇಲ್ಲ ಎಂದು ಬಂಕ್ನವರು ವಿತರಣೆ ನಿಲ್ಲಿಸಿಬಿಡುತ್ತಾರೆ. ಪೆಟ್ರೋಲ್ ಕೂಡ ಖಾಲಿಯಾಗಿದೆ ನಾಳೆ ಬನ್ನಿ ಎನ್ನುತ್ತಾರೆ. ಬೆಳಿಗ್ಗೆಯೇ ಬಂದು ಬಿಸಿಲಾಗ ಪಾಳೆ ಹಚ್ಚತೇವಿ. ಒಮ್ಮಿಂದೊಮ್ಮೆಲೆ ಬಂದ್ ಮಾಡಿ ನಾಳಿಗ ಬರ್ರಿ ಅಂತಾರ’ ಎಂದು ಬಪ್ಪರಗಿಯ ಯಲ್ಲಪ್ಪ ಕಕ್ಕೇರಿ ಹಾಗೂ ಇತರರು ಕಷ್ಟ ತೋಡಿಕೊಂಡರು.

‘ಜಮೀನಿನೊಳಗ ಎಲ್ಲ ಕೆಲಸ ನಿಂತಾವ್ರಿ, ಟ್ರ್ಯಾಕ್ಟರ್ ತೊಗೊಂಡ ಬಂದಿನಿ. ₹ 2000 ಮೊತ್ತದಷ್ಟೇ ಕೊಟ್ಟರೆ ಊರು ಮುಟ್ಟುವುದರೊಳಗೆ ಖಾಲಿಯಾಗತ್ತರಿ. ಹೆಚ್ಚಿಗೆ ಹಾಕ್ರಿ’ ಎಂದು ಕೊಣ್ಣೂರಿನ ಎಚ್.ಎಂ. ಅವಟಿ ಸಂಕಟ ತೋಡಿಕೊಂಡರು.

‘ನಮ್ಮ ತಾಲ್ಲೂಕಿನ ಮಂದಿಗೆ ಎಣ್ಣಿ ಸಿಗ್ತಾ ಇಲ್ಲ. ಬ್ಯಾರೆ ತಾಲ್ಲೂಕಿನ ಮಂದಿ ಬಂದಾರ್ರಿ, ಅವರವರ ಊರಿನೊಳಗ ಪೆಟ್ರೋಲ್ ಬಂಕ್ ತೆರೆಯುವಂಗ ಯಾಕ ಮಾಡುತ್ತಿಲ್ಲ’ ಎಂದು ಮೂಕಿಹಾಳದ ಸಿದ್ಧನಗೌಡ ಇಸಾಂಪುರ ಪ್ರಶ್ನಿಸಿದರು.

‘ಸಾಲುಗಟ್ಟಿ ನಿಂತವರಲ್ಲಿ ಹೊರಟ್ಟಿ, ಕರೆಕಲ್ಲ, ಮನ್ಯಾಳ, ಚಳ್ಳಗಿ ಹೀಗೆ ಬೇರೆ ತಾಲ್ಲೂಕಿನವರ ಸಂಖ್ಯೆಯೇ ಅಧಿಕವಿತ್ತು. ಎಣ್ಣೆ ಸ್ಟಾಕ್ ಇದ್ರೂ ಇಲ್ಲಂತಾರ್ರಿ. ಅವರ ಬಳಿ ಡಿಎಸ್.ಆರ್ ಬುಕ್ ತೋರಿಸಲು ಹೇಳಿ, ತಹಶೀಲ್ದಾರ್, ಪಿಎಸ್.ಐ ಬಂಕ್ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಎಲ್ಲ ಬಂಕ್ಗಳಲ್ಲಿ ತೈಲ ಪೂರೈಕೆ ಏಕಿಲ್ಲ ಎಂಬುದನ್ನು ಮಾರಾಟ ಅಧಿಕಾರಿಯನ್ನು ವಿಚಾರಿಸಬೇಕು’ ಎಂದು ಶಿವಣ್ಣ ಬಂದಾಳ ಒತ್ತಾಯಿಸಿದರು.

Quote - ಎಲ್ಲ ಪೆಟ್ರೋಲ್ ಬಂಕ್ಗಳಿಗೆ ಭೇಟಿ ನೀಡಿ ಅಗತ್ಯ ವ್ಯವಸ್ಥೆ ಮಾಡಲಿದ್ದೇನೆ. ಮಾರಾಟ ಅಧಿಕಾರಿಗಳ ಸಭೆ ಕೂಡ ಮಾಡುತ್ತೇವೆ ಡಾ.ವಿನಯಾ ಹೂಗಾರ ತಹಶೀಲ್ದಾರ್

Quote - ನಮಗೂ ಮಾನವೀಯತೆ ಇದೆ. ರೈತಾಪಿಗಳ ಕಷ್ಟ ನಮಗೂ ತಿಳಿದಿದೆ. ಇರುವಷ್ಟು ಕೊಡ್ತೀವಿ. ಆದರೆ ನಮಗೆ ಪೊಲೀಸ್ ರಕ್ಷಣೆ ಬೇಕು ಸಿ.ಎಸ್. ಮಾಳಿ ಮಲ್ಲಿಕಾರ್ಜುನ ಪೆಟ್ರೋಲಿಯಂ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.