ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ: ಕೋಟಿ ಒಡೆಯ ಪಿ.ಎಚ್‌.ಪೂಜಾರ

Last Updated 20 ನವೆಂಬರ್ 2021, 16:06 IST
ಅಕ್ಷರ ಗಾತ್ರ

ವಿಜಯಪುರ: ಬಾಗಲಕೋಟೆ–ವಿಜಯಪುರ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಹನುಮಂತಪ್ಪ ಪೂಜಾರ (ಪಿ.ಎಚ್‌.ಪೂಜಾರ) ಅವರು ಕೋಟಿ ಒಡೆಯನಾಗಿದ್ದಾರೆ.

ಚುನಾವಣಾಧಿಕಾರಿ ಅವರಿಗೆ ಶನಿವಾರ ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ನಗದು ₹95,100 ಹಾಗೂ250 ಗ್ರಾಂ ಬಂಗಾರ, 500 ಗ್ರಾಂ ಬೆಳ್ಳಿ, ಒಂದು ಇನೋವಾ ಕಾರು, ವಿವಿಧ ಬ್ಯಾಂಕ್‌ ಅಕೌಂಟ್‌ ಮತ್ತು ಹೂಡಿಕೆ ಸೇರಿದಂತೆ ₹1,79,68,161 ಚರಾಸ್ತಿ ಹಾಗೂ₹2,32,01,021 ಮೊತ್ತದ ಸ್ಥಿರಾಸ್ಥಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಅವರ ಪತ್ನಿ ಪ್ರಮೀಣಾ ದೇವಿ ಬಳಿ ₹1,50,500 ನಗದು, 1790 ಗ್ರಾಂ ಬಂಗಾರದ ಆಭರಣ, 2278 ಗ್ರಾಂ ಬೆಳ್ಳಿ ಸೇರಿದಂತೆ ₹1,43,33,139 ಕೋಟಿ ಮೊತ್ತದ ಚರಾಸ್ತಿ ಹಾಗೂ 13 ಎಕರೆ ಜಮೀನು ಸೇರಿದಂತೆ ಒಟ್ಟು ₹2,01,74,000 ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ.

ಅವಿಭಕ್ತ ಕುಟುಂಬದ (ಎಚ್‌ಯುಎಫ್‌) ಹೆಸರಲ್ಲಿ ₹1,80,350 ನಗದು, 300 ಗ್ರಾಂ ಬಂಗಾರ, 475 ಗ್ರಾಂ ಬೆಳ್ಳಿ ಸೇರಿದಂತೆ ₹48,75,403 ಚರಾಸ್ತಿ ಹಾಗೂ ₹2,89,43,550 ಮೊತ್ತದ ಸ್ಥಿರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT