ವಿಜಯಪುರ: ಸರ್ಕಾರಿ ಹುದ್ದೆಗಳ ಭರ್ತಿ ಹಾಗೂ ಕೆಪಿಎಸ್ಸಿಯಲ್ಲಿ ನಡೆದ ನೇಮಕಾತಿ ಪರೀಕ್ಷೆಗಳ ಅಕ್ರಮದ ಬಗ್ಗೆ ತನಿಖೆಗೆ ಆಗ್ರಹಿಸಿ ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಅಕ್ಸಾ) ವತಿಯಿಂದ ಏ.21ರಂದು ವಿಜಯಪುರ ನಗರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.

ಕೆಪಿಎಸ್ಸಿಯಲ್ಲಿ ನಡೆದಿರುವ ಎಲ್ಲ ಪರೀಕ್ಷೆಗಳಲ್ಲಿನ ಅಕ್ರಮಗಳ ತನಿಖೆಯನ್ನು ಕೂಡಲೇ ಸಿಬಿಐ ಕೊಡಬೇಕು. ಸರ್ಕಾರದ ವಿವಿಧ ಇಲಾಖೆಯಲ್ಲಿ ಸುಮಾರು 2,84,000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಏ.21ರಂದು 500 ಉದ್ಯೋಗಾಕಾಂಕ್ಷಿಗಳು ವಿಜಯಪುರ ನಗರದ ಶಿವಾಜಿ ವೃತ್ತದಿಂದ ಪಾದಯಾತ್ರೆ ನಡೆಸಿ, ದರ್ಬಾರ ಮೈದಾನದಲ್ಲಿ ಅನಿರ್ದಿಷ್ಟಾವಧಿ ಹೋರಾಟವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆಸುವ ಬಗ್ಗೆ ಅಕ್ಸಾ ಅಧ್ಯಕ್ಷ ಕಾಂತಕುಮಾರ ಅನುಮತಿ ಕೋರಿದ್ದರು.

ಪೊಲೀಸರು ಮನವಿ ಪತ್ರವನ್ನು ಪರಿಶೀಲಿಸಿ, ಅದಕ್ಕೆ ಸ್ಪಷ್ಟಿಕರಣ ಕೋರಿ ಎರಡು ಬಾರಿ ಪೊಲೀಸ್ ನೋಟಿಸ್ ಜಾರಿ ಮಾಡಿದ್ದರು. ಆದರೆ, ಸ್ಪಷ್ಟಿಕರಣದ ಉತ್ತರಗಳು ಸಮರ್ಪಕವಾಗಿಲ್ಲ ಎಂಬುದು ಸೇರಿ 14 ಅಂಶಗಳನ್ನು ಉಲ್ಲೇಖಿಸಿ ಅನುಮತಿಯನ್ನು ನಿರಾಕರಿಸಲಾಗಿದೆ.

ಕೊಲ್ಹಾರದಲ್ಲಿ ಬಿರುಸಿನ ಮಳೆ

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಗುಡುಗು–ಸಿಡಿಲು–ಬಿರುಗಾಳಿಯೊಂದಿಗೆ ಒಂದು ತಾಸು ಧಾರಾಕಾರ ಮಳೆಯಾಗಿದೆ. ವಿದ್ಯುತ್ ಕಂಬಗಳು ಧರೆಗೆ ಉರುಳಿವೆ ಹಾಗೂ ಮನೆಯ

ಮುಂದಿನ ಪತ್ರಾಸ್ ಹಾರಿಹೋಗಿವೆ.

ವಿಜಯಪುರ ನಗರ, ತಾಂಬಾ, ತಿಕೋಟಾ, ಮುದ್ದೇಬಿಹಾಳ ಪಟ್ಟಣ ವ್ಯಾಪ್ತಿಯಲ್ಲೂ ಸಾಧಾರಣ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.