ಶನಿವಾರ, ಜನವರಿ 28, 2023
20 °C

ಶ್ರೀಗಳ ಚೇತರಿಕೆಗೆ ದರ್ಗಾದಲ್ಲಿ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಿದ್ಧೇಶ್ವರ ಸ್ವಾಮೀಜಿಗಳ ಆರೋಗ್ಯ ಚೇತರಿಕೆ ಪ್ರಾರ್ಥಿಸಿ ಮುಸ್ಲಿಂ ಮುಖಂಡರು ನಗರದ  ಅಬ್ದುಲ್ ರಜಾಕ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಾಂಗ್ರೆಸ್‌ ಮುಖಂಡ  ಅಬ್ದುಲ್ ಹಮೀದ್ ಮುಶ್ರೀಫ್ ಹಾಗೂ ಬೆಂಬಲಿಗರು ದರ್ಗಾಕ್ಕೆ ಚಾದರ ಹೊದಿಸಿ,  ಸಿದ್ಧೇಶ್ವರ ಶ್ರೀಗಳ ಆರೋಗ್ಯ ಸುಧಾರಣೆ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ತಮ್ಮ ಪ್ರವಚನದ ಮೂಲಕ ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರನ್ನು ಹೊಂದಿರುವ  ಸ್ವಾಮೀಜಿಗಳು ಬೇಗ ಗುಣಮುಖರಾಗಲಿ, ಮತ್ತೆ ನಮಗೆಲ್ಲರಿಗೂ ಪ್ರವಚನ ನೀಡಲಿ, ಶತಾಯುಷಿಗಳಾಗಲಿ ಎಂದು ಅಬ್ದುಲ್ ಹಮೀದ್ ಮುಶ್ರೀಫ್ ಹೇಳಿದರು.

ಸಿದ್ಧೇಶ್ವರ ಸ್ವಾಮೀಜಿ  ನಮ್ಮ ನೆಲದಲ್ಲಿ ಹುಟ್ಟಿ, ವಿಶ್ವದ ಶ್ರೇಷ್ಠ ಸಂತರಾಗಿದ್ದು, ನಮ್ಮ ಪಾಲಿನ ಭಾಗ್ಯ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು