ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಕ್ಛ್ ಕಾಯ್ದೆ ತಿದ್ದಿಪಡಿ ವಿರೋಧಿಸಿ ಪ್ರತಿಭಟನೆ

Published : 14 ಸೆಪ್ಟೆಂಬರ್ 2024, 16:16 IST
Last Updated : 14 ಸೆಪ್ಟೆಂಬರ್ 2024, 16:16 IST
ಫಾಲೋ ಮಾಡಿ
Comments

ಕೊಲ್ಹಾರ: ‘ಲೋಕಸಭೆಯಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ವಿಧೇಯಕ ಮಂಡಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ, ಸರ್ಕಾರ ವಕ್ಫ್ ಆಸ್ತಿ ಉಳಿಸಬೇಕು’ ಎಂದು ಆಗ್ರಹಿಸಿ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಹಾಗೂ ಪಟ್ಟಣದ ನಾಗರಿಕರ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಬಳಿಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಟಿಪ್ಪು ಸುಲ್ತಾನ ವೃತ್ತದ ಮೂಲಕ ಹೊರಟ ಮೆರವಣಿಗೆ ಮಹಾತ್ಮ ಗಾಂಧೀ ವೃತ್ತ, ಅಗಸಿ ಮಾರ್ಗವಾಗಿ ಸಂಗಮೇಶ್ವರ ವೃತ್ತದ ಮೂಲಕ ಹಾಯ್ದು ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಡಿಪಿಐ ಮುಖಂಡ ಅಯ್ಯೂಬ ದಿಂದಾರ, ‘ಕೇಂದ್ರದ ಬಿಜೆಪಿ ಸರ್ಕಾರ ಮುಸ್ಲಿಂರನ್ನು ತುಳಿಯುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ವಕ್ಪ್ ತಿದ್ದುಪಡಿ ತರುವ ಮೂಲಕ ವಕ್ಪ್ ಆಸ್ತಿಯ ಮೇಲೆ ಕಣ್ಣಿಟ್ಟಿದೆ. ಮುಸ್ಲಿಂ ಸಮುದಾಯದ ಸಬಲೀಕರಣಕ್ಕೆ ಮೀಸಲಿಟ್ಟಿರುವ ವಕ್ಪ್ ಆಸ್ತಿಯನ್ನು ತಿದ್ದುಪಡಿಯ ಮೂಲಕ ಕಬಳಿಸಲು ಸಂಚು ಹಾಕಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಬಲವಾಗಿ ವಿರೋಧಿಸುತ್ತೆವೆ’ ಎಂದರು.

ಎಸ್‌ಡಿಪಿಐ ಮುಖಂಡರಾದ ಹಾಫೀಜ್ ಬಾಷಾ ಮುಲ್ಲಾ, ಅಜೀಂ ಪಟ್ಟೇದವರ, ರಜಬಅಲಿ ಬಿಜಾಪುರ, ಅಯ್ಯೂಬ ದಿಂದಾರ, ಪೀರಅಹ್ಮದ ಕಂಕರಪೀರ, ದಾದಾ ಕಂಕರಪೀರ, ಫಯಾಜ ಇನಾಮದಾರ, ಸದ್ದಾಂ ಬಬಲಾದ, ಹಸನ ಮುಲ್ಲಾ, ಅಹಿಂದ ಮುಖಂಡ ವಸಿಂ ಗಿರಗಾಂವಿ, ಇಕ್ಬಾಲ್ ನದಾಫ್, ಮೋಹಸಿನ್ ಕಾಖಂಡಕಿ, ಸಾದೀಕ ಯಾದವಾಡ ಹಾಗೂ ಪಟ್ಟಣದ ಮುಸ್ಲಿಂ ಸಮಾಜದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT