ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ, ಜೆಡಿಎಸ್‌ ವಿರುದ್ಧ ಪ್ರತಿಭಟನೆ ಆ.11 ರಂದು

Published : 2 ಆಗಸ್ಟ್ 2024, 15:53 IST
Last Updated : 2 ಆಗಸ್ಟ್ 2024, 15:53 IST
ಫಾಲೋ ಮಾಡಿ
Comments

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳೆಯಲು ಪ್ರಯತ್ನಿಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಆಗಸ್ಟ್‌ 11ರಂದು ಬೆಳಿಗ್ಗೆ 11ಕ್ಕೆ ನಗರದಲ್ಲಿ ಸೂಮಾರು 25,000ಕ್ಕೂ ಹೆಚ್ಚು ಜನರೊಂದಿಗೆ ಬೃಹತ್‌ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಶುಕ್ರವಾರ ಜಿಲ್ಲಾ ಅಹಿಂದ ವರ್ಗಗಳ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರ‍್ಯಾಲಿಯಲ್ಲಿ ಜಿಲ್ಲೆಯ ಶಾಸಕರು, ಮುಖಂಡರು, ಪ್ರಗತಿಪರ ಚಿಂತಕರು, ಹೋರಾಟಗಾರರು, ಸಿದ್ದರಾಮಯ್ಯನವರ ಬೆಂಬಲಿಗರನ್ನು ಆಹ್ವಾನಿಸುತ್ತಿದ್ದು, ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಾಂತಿಯುತವಾಗಿ ಸಿದ್ದರಾಮಯ್ಯನವರ ಪರವಾಗಿ ಧ್ವನಿ ಎತ್ತಬೇಕು ಎಂದು ನಿರ್ಣಯಿಸಲಾಗಿದೆ.

ಪ್ರತಿಭಟನಾ ರ‍್ಯಾಲಿಯು ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾಗಿ ನಗರದ ಗಾಂಧಿವೃತ್ತ, ಬಸವೇಶ್ವರ ವೃತ್ತ ವಾರ್ಗವಾಗಿ  ಬಾಬಾಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಕೊನೆಗೊಳ್ಳಲಿದೆ ಎಂದು ಸಭೆಯಲ್ಲಿ ಜಿಲ್ಲೆಯ ಅಹಿಂದ ಮುಖಂಡರಿಂದ ಒಮ್ಮತದ ತೀರ್ಮಾನ ಮಾಡಲಾಗಿದೆ.

ಅಬ್ದುಲ್‌ಹಮೀದ್‌ ಮುಶ್ರೀಫ್‌, ಎಸ್.ಎಂ.ಪಾಟೀಲ ಗಣಿಯಾರ, ಅಬ್ದುಲರಜಾಕ್‌ ಹೋರ್ತಿ, ಎಂ.ಸಿ. ಮುಲ್ಲಾ, ಸೋಮನಾಥ ಕಳ್ಳಿಮನಿ, ನಾಗರಾಜು ಲಂಬು, ಗಜಾನಂದ ಚೌಧರಿ, ಮಲ್ಲು ಬಿದರಿ, ಸತೀಶ ಅಡವಿ, ಅಡಿವೆಪ್ಪ ಸಾಲಗಲ್, ಬಿ.ಎಸ್. ಗಸ್ತಿ, ಜಕ್ಕಪ್ಪ ಯಡವೆ, ಪ್ರಭುಗೌಡ ಪಾಟೀಲ, ಮಹಾದೇವ ರೇವಜಿ, ಫಯಾಜ ಕಲಾದಗಿ, ಸಂಜು ಕಂಬಾಗಿ, ಎಂ.ಎಸ್. ನಾಯಕ, ಹಿರೋಳ್ಳಿ ವಕೀಲರು, ಮಲ್ಲು ಕಾಮನಕೇರಿ, ರಾಜು ಕಗ್ಗೋಡ, ಮಾಳಪ್ಪ ಗುಗದಡ್ಡಿ, ಮೋಹನ ದಳವಾಯಿ, ರವಿ ಕಿತ್ತೂರ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT