ಗುರುವಾರ , ಜನವರಿ 21, 2021
17 °C

ಯತ್ನಾಳ ವಿರುದ್ಧ ಕರವೇ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಬಂಧಿಸಿದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕನ್ನಡಪರ ಸಂಘಟನೆಗಳ ಮುಖಂಡರನ್ನು ಕುರಿತಾಗಿ ಲಘುವಾಗಿ ಮಾತನಾಡಿರುವದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದಿಂದ ಮಂಗಳವಾರ ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಶಾಸಕ ಯತ್ನಾಳ ವಿರುದ್ದ ಕಾರ್ಯಕರ್ತರು ಘೊಷಣೆ ಕೂಗಿದರು. ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಾಂತ ಬಿಜಾಪುರ, ಆಲಮೇಲ ಘಟಕ ಅಧ್ಯಕ್ಷ ಶಶಿಧರ ಗಣಿಹಾರ, ಸೈಫನ್ ಜಮಾದಾರ ಮಾತನಾಡಿ, ಯತ್ನಾಳರು ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಅದರಂತೆ ಅವರ ಬೆಂಬಲಿಗ ರಾಘವ ಅಣ್ಣಿಗೇರಿ ಕೂಡ ಕನ್ನಡ ಹೋರಾಟಗಾರರನ್ನು ಕೇವಲವಾಗಿ ಮಾತನಾಡಿದ್ದಾರೆ.

ಯತ್ನಾಳರು ಕೂಡಲೇ ಎಚ್ಚೆತ್ತುಕೊಂಡು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿಮ್ಮ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಕಾರು ತಹಶೀಲ್ದಾರ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರವೇ ಪ್ರಮುಖರಾದ ರಾಜೂ ಮದರಖಾನ, ರವಿಕಾಂತ ಬಿರಾದಾರ, ಮುತ್ತು ಹಿಪ್ಪರಗಿ, ಭೀಮು ಚೌರ, ಮುತ್ತು ಬಂಡಿವಡ್ಡರ, ಮಂಜೂ ಮೇಲಿನಮನಿ, ರಾಜೂ ಬಡಿಗೇರ, ರಾಮ ಮಳ್ಳಿ, ಮಾಂತೇಶ ನಾಯ್ಕೋಡಿ, ಆಕಾಶ ಮೇಲಿನಮನಿ, ಆದಿತ್ಯ ಬಿಸನಾಳ, ಶಶಿ ಹಿಪ್ಪರಗಿ, ಮುತ್ತು ವಗ್ಗಿ, ಪ್ರೀತಮ ಚೌರ, ಪ್ರದೀಪ ಮೇಲಿನಮನಿ, ಈರಣ್ಣ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು