ವಿಜಯಪುರ: ಗುಡುಗು, ಸಿಡಿಲಿನ ಅಬ್ಬರದೊಂದಿಗೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು.
ಪ್ರಸಕ್ತ ಮಳೆಗಾಲದಲ್ಲಿ ಇಷ್ಟೊಂದು ದಟ್ಟ ಪ್ರಮಾಣದಲ್ಲಿ ಮಳೆ ಆಗಿರಲಿಲ್ಲ. ರಾತ್ರಿ 8ರಿಂದ ಆರಂಭವಾಗಿರುವ ರಭಸದ ಮಳೆಗೆ ಜನ, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಧಾರಾಕಾರ ಮಳೆಗೆ ಜನ ತತ್ತರಿಸಿ ಹೋದರು.
ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಮಳೆ ಆಗಾಗ ಸುರಿಯುತ್ತಿದ್ದು, ಸೋಮವಾರ ರಾತ್ರಿ ಭಾರಿ ಮಳೆಯಾಯಿತು. ತಗ್ಗು ಪ್ರದೇಶಗಳು, ಹಳ್ಳಗಳು ಜಲಾವೃತವಾಗಿದ್ದವು. ಹೊಲಗಳಲ್ಲಿ ನೀರು ನಿಂತು, ಬೆಳೆಗಳಿಗೆ ತೊಂದರೆಯಾಗಿದೆ.
ಸಿಂದಗಿ, ತಾಳಿಕೋಟೆ, ಬಸವನ ಬಾಗೇವಾಡಿ ಪಟ್ಟಣಗಳಲ್ಲೂ ಉತ್ತಮ ಮಳೆಯಾಗಿದೆ.