ವಿಜಯಪುರ: ಇಲ್ಲಿನ ಆನಂದ ನಗರದಲ್ಲಿ ರಕ್ಷಾ ಬಂಧನ ಅಂಗವಾಗಿ ಗಿಡಮರಗಳಿಗೆ ಯುವ ಭಾರತ ಸಮಿತಿ ವತಿಯಿಂದ ರಾಖಿ ಕಟ್ಟುವ ಮೂಲಕ ಪರಿಸರ ರಕ್ಷಣೆ ಸಂದೇಶದೊಂದಿಗೆ ರಕ್ಷಾ ಬಂಧನ ಹಬ್ಬ ಆಚರಿಸಲಾಯಿತು.
ಆನಂದ ನಗರದಲ್ಲಿರುವ ಉದ್ಯಾನದಲ್ಲಿ ಮೂರು ವರ್ಷಗಳ ಹಿಂದೆ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ನೇತೃತ್ವದಲ್ಲಿ ನೆಡಲಾಗಿದ್ದ 100 ಸಸಿಗಳಿಗೆ ರಾಖಿ ಕಟ್ಟಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕಾರಜೋಳ, ರಕ್ಷಾ ಬಂಧನ ಸಹೋದರ ಸಹೋದರಿಯರ ಪವಿತ್ರ ಬಾಂಧವ್ಯದ ಸಂಕೇತವಾಗಿದೆ, ಇಡೀ ಮನುಕುಲವನ್ನು ಗಿಡಮರಗಳು ಸಂರಕ್ಷಿಸುತ್ತಿವೆ, ಹೀಗಾಗಿ ಸಸಿಗಳ ನೆಡುವ ಸಂದೇಶ ಸಾರಲು ಈ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ, ಈ ನಿಟ್ಟಿನಲ್ಲಿ ಪರಿಸರ ರಕ್ಷಣೆ, ಸ್ವಚ್ಛತೆಗಾಗಿ ಯುವ ಭಾರತ ಸಂಸ್ಥೆ ಸಕ್ರೀಯವಾಗಿದೆ ಎಂದರು.
ಶಿವಲಿಂಗ ಮಹಾಸ್ವಾಮೀಜಿ ಮಾತನಾಡಿದರು. ವಿನೋದಕುಮಾರ ಮಣೂರ, ಬಸವರಾಜ ಕೋರಿ, ಬಸವರಾಜ ಬೈಚಬಾಳ, ಸಚೀನ ಕುಮಶಿ, ಸುಭಾಷ ಕರಿಕಬ್ಬಿ, ವಿರೇಶ ಗೊಬ್ಬೂರ, ಮಧು ಕಲಾದಗಿ, ಸತೀಶ ಬಾಗಿ ,ಚಿದಾನಂದ ಔರಂಗಬಾದ, ರವಿ ಬಿರಾದಾರ, ಕಲ್ಮೇಶ ಅಮರಾವತಿ, ರವಿ ದೆಗಿನಾಳ, ಸಂತೋಷ ಝಳಕಿ ಶರಣಬಸು ಕುಂಬಾರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.