ಆಲಮಟ್ಟಿ: ಅಖಂಡ ವಿಜಯಪುರ ಜಿಲ್ಲೆಯಿಂದ 1982ರಲ್ಲಿ ಪೊಲೀಸ್ ಅಧಿಕಾರಿಗಳಾಗಿ ಆಯ್ಕೆಯಾಗಿ ನಿವೃತ್ತರಾದ 36 ಜನರು ಸೋಮವಾರ ಆಲಮಟ್ಟಿಯ ರಾಕ್ ಗಾರ್ಡನ್ನಲ್ಲಿ ಸಭೆ ಸೇರಿ ತಮಗೆ ತರಬೇತಿ ನೀಡಿದ ಗುರುವಿಗೆ ವಿಶೇಷವಾಗಿ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.

ರಾಜ್ಯದ ಡಿಜಿ ಐಜಿಪಿಯಾಗಿ ನಿವೃತ್ತರಾಗಿರುವ ಎಸ್.ಟಿ. ರಮೇಶ ಅವರು 1982ರಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅಖಂಡ ವಿಜಯಪುರ ಜಿಲ್ಲೆಯಿಂದ 76 ಜನರು ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದರು. ಅವರೆಲ್ಲರೂ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಿವಿಧ ಹಂತಗಳಲ್ಲಿ ಅಧಿಕಾರಿಗಳಾಗಿ ನಿವೃತ್ತರಾಗಿದ್ದಾರೆ. ಈ ಪೈಕಿ 23 ಜನ ನಿಧನರಾಗಿದ್ದಾರೆ.

ನಿವೃತ್ತ ಸಹೋದ್ಯೋಗಿ ಗೆಳೆಯರಲ್ಲಿ ಮೂವರು ಸಿಪಿಐ, ಐವರು ಪಿಎಸ್ಐ ಹಾಗೂ 18 ಜನ ನಿವೃತ್ತ ಎಎಸ್ಐ ಅಧಿಕಾರಿಗಳು ಆಲಮಟ್ಟಿಯಲ್ಲಿ ಸಭೆ ಸೇರಿ ತಮ್ಮ ಸೇವಾವಧಿ ಅನುಭವಗಳು, ನಿವೃತ್ತಿ ಬಳಿಕದ ಜೀವನ ಸೇರಿದಂತೆ ಉಭಯ ಕುಶಲೋಪರಿ ಹಂಚಿಕೊಂಡರು.

ತರಬೇತಿ ಅವಧಿಯಲ್ಲಿ ಶಿಸ್ತುಬದ್ಧ ಕವಾಯತು ಕಲಿಸಿಕೊಟ್ಟ ಗುರುಗಳಾದ ನಿವೃತ್ತ ಆರ್.ಎಸ್.ಐ ಆರ್.ಎಂ. ಬಗಲಿ ಅವರನ್ನು ಸನ್ಮಾನಿಸಿದರು.

ನಿವೃತ್ತ ಸಿಪಿಐ ಶಾಮರಾಜ್ ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಎಸ್ಐ ಎ.ಎನ್. ಆಲದಿ ನಿರೂಪಿಸಿದರು. ನಿವೃತ್ತ ಸಿಪಿಐ ಎಂ.ಬಿ. ಗೊಳಸಂಗಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.