ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಆರ್‌ಎಸ್‍ಎಸ್ ವಿಜಯಪುರ ನಗರ ಘಟಕದ ವಾರ್ಷಿಕೋತ್ಸವ
Last Updated 6 ನವೆಂಬರ್ 2022, 15:39 IST
ಅಕ್ಷರ ಗಾತ್ರ

ವಿಜಯಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಜಯಪುರ ನಗರ ಘಟಕದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಆರ್‌ಎಸ್‍ಎಸ್ ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಂಪ್ರದಾಯಿಕ ಉಡುಗೆ, ಟೊಪ್ಪಿ ಧರಿಸಿದ ಸಾವಿರಾರು ಸ್ವಯಂಸೇವಕರು ಕೈಯಲ್ಲಿ ಲಾಠಿ ಹಿಡಿದು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಚಿಕ್ಕಮಕ್ಕಳು ಸಹ ಗಣವೇಷದಲ್ಲಿ ಭಾಗವಹಿಸಿ ಹಿರಿಯ ಸ್ವಯಂ ಸೇವಕರೊಂದಿಗೆ ಉತ್ಸಾಹದ ಹೆಜ್ಜೆ ಹಾಕಿದರು.

ಪುಷ್ಪವೃಷ್ಟಿ:ಅನೇಕ ಕಡೆಗಳಲ್ಲಿ ಸಾರ್ವಜನಿಕರು ಪಥಸಂಚಲನ ಮಾರ್ಗದಲ್ಲಿ ಪುಷ್ಟವೃಷ್ಟಿ ಮಾಡಿ ಸ್ವಯಂ ಸೇವಕರಿಗೆ ಅಭಿನಂದನೆ ಸಲ್ಲಿಸಿದರು. ಮಾರ್ಗಮಧ್ಯೆ ದೇಶಾಭಿಮಾನಿಗಳ ಛದ್ಮವೇಷದಲ್ಲಿ ಚಿಣ್ಣರು ಕಂಗೊಳಿಸಿ ಪಥಸಂಚಲನೆಗೆ ವಿಶೇಷ ಮೆರಗು ತಂದರು.

ಅಲಂಕೃತ ರಥದಲ್ಲಿ ಆರ್‌ಎಸ್‍ಎಸ್ ಸಂಸ್ಥಾಪಕ ಡಾ.ಕೇಶವ ಹೆಡಗೆವಾರ್ ಹಾಗೂ ಎಂ.ಎಸ್. ಗೊಳವಲ್ಕರ ಅವರ ಭಾವಚಿತ್ರವನ್ನು ಇರಿಸಲಾಗಿತ್ತು. ಪಥಸಂಚಲನ ಸಾಗುವ ದಾರಿಯುದ್ದಕ್ಕೂ ಚಿತ್ತಾರದ ರಂಗವಲ್ಲಿ ವೈಭವ ಸೃಜನೆಯಾಗಿತ್ತು. ಸರಾಫ್ ಬಜಾರ್, ಡೋಬಳೆ ಗಲ್ಲಿ, ಶ್ರೀ ಸಿದ್ದೇಶ್ವರ ದೇವಾಲಯ, ಕೋರಿ ಚೌಕ್ ಹೀಗೆ ಮಾರ್ಗದಲ್ಲಿ ಬಣ್ಣಬಣ್ಣದ ರಂಗೋಲಿ ಗಣವೇಷಧಾರಿಗಳಿಗೆ ಅಭೂತಪೂರ್ವ ಸ್ವಾಗತ ಕೋರಿತು. ವಿಜಯಪುರದ ಸಿದ್ದೇಶ್ವರ ದೇವಾಲಯ ಬಳಿ ಕೋಟೆಗೋಡೆ ಮಾದರಿಯ ಬೃಹತ್ ಕಟೌಟ್ ಗಮನ ಸೆಳೆಯಿತು.

ವಿಜಯಪುರದ ಅಥಣಿ ರಸ್ತೆಯಿಂದ ಆರಂಭವಾದ ಪಥಸಂಚಲನ ಶಿವಾಜಿ ವೃತ್ತ, ಡೋಬಳೆ ಗಲ್ಲಿ, ಉಪ್ಪಲಿ ಬುರ್ಜ್, ಸರಾಫ್ ಬಜಾರ್, ಗಾಂಧಿವೃತ್ತ, ಶ್ರೀ ಸಿದ್ದೇಶ್ವರ ದೇವಾಲಯ, ಕೋರಳ್ಳಿ ವೃತ್ತ, ರಜಪೂತ ಓಣಿ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ನಾಗೂರ ಆಯುರ್ವೇದ ಮಹಾವಿದ್ಯಾಲಯದ ಆವರಣಕ್ಕೆ ತಲುಪಿ ಸಂಪನ್ನಗೊಂಡಿತು. ಅಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಅನೇಕರು ತಮ್ಮ ವಿಚಾರ ವ್ಯಕ್ತಪಡಿಸಿದರು.

‘41 ದೇಶಗಳಲ್ಲಿ ಆರ್‌ಎಸ್‍ಎಸ್ ಶಾಖೆ’
ವಿಜಯಪುರ:
ಭಾರತ ಮಾತ್ರವಲ್ಲದೇಅಮೆರಿಕಾ, ಇಂಗ್ಲೆಂಡ್ ಸೇರಿದಂತೆ 41 ದೇಶಗಳಲ್ಲಿ ಆರ್‌ಎಸ್‍ಎಸ್ ಶಾಖೆಗಳು ಸಕ್ರೀಯವಾಗಿವೆ ಎಂದುಆರ್.ಎಸ್.ಎಸ್. ಧರ್ಮ ಜಾಗರಣಾ ಪ್ರಾಂತ ಸಂಯೋಜಕ ದಿಲೀಪ್‌ ವರ್ಣೆಕರ ಹೇಳಿದರು.

ನಗರದ ನಾಗೂರ ಮಹಾವಿದ್ಯಾಲಯದ ಮೈದಾನದಲ್ಲಿ ಆರ್‌ಎಸ್‍ಎಸ್ ನಗರ ಮಂಡಳದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಆರ್‌ಎಸ್‍ಎಸ್ ನಿರ್ನಾಮ ಮಾಡುತ್ತೇನೆ ಎಂದು ಘಂಟಾಘೋಷವಾಗಿ ಸಾರಿದ್ದ ಈ ದೇಶದ ನಾಯಕರೊಬ್ಬರು ಮುಂದೊಂದು ದಿನ ಬೃಹತ್ ವೇದಿಕೆಯಲ್ಲಿ ಆರ್‌ಎಸ್‍ಎಸ್ ಆಶಾಕಿರಣ ಎಂದು ಬಣ್ಣಿಸಿದರುಎಂದು ಹೇಳಿದರು.

ಸಂಘದ ಚಟುವಟಿಕೆಗಳಲ್ಲಿ ಯುವಕರ ತಂಡದ ನೇತೃತ್ವ ವಹಿಸಿಡಾ.ಕೇಶವ ಹೆಡಗೆವಾರ ಮುನ್ನಡೆಯುತ್ತಿದ್ದಾಗ ಜನರು ಅವರನ್ನು ಮೂರ್ಖರ ನಾಯಕ ಎಂದು ಜರಿಯುತ್ತಿದ್ದರು. ಆದರೂ ಸಹ ಅವರು ಎಲ್ಲವನ್ನೂ ಸಹಿಸಿಕೊಂಡ ಪರಿಣಾಮ

ಉದ್ಯಮಿ ಪ್ರಕಾಶ ಸೋನಾರ, ಆರ್‌ಎಸ್‍ಎಸ್ ವಿಭಾಗ ಸಂಘ ಚಾಲಕ ಚಿದಂಬರ ಕರ್ಮರಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT